alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ದಾಳಿಗೆ ಬೆಚ್ಚಿಬಿದ್ದ ಅಮೆರಿಕ

ಕೊಲರಾಡೊ: ಬುಧವಾರವಷ್ಟೇ ನ್ಯೂಯಾರ್ಕ್ ನಲ್ಲಿ ಟ್ರಕ್ ದಾಳಿಗೆ 8 ಮಂದಿ ಬಲಿಯಾದ ಘಟನೆ ನಡೆದ ಬೆನ್ನಲ್ಲೇ ಗುರುವಾರ ಅಮೆರಿಕದಲ್ಲಿ ಮತ್ತೊಂದು ದಾಳಿ ನಡೆದಿದೆ.

ಕೊಲಾರೊಡೊದಾ ಡೆನ್ವರ್ ಉಪನಗರದ ವಾಲ್ಮಾರ್ಟ್ ನಲ್ಲಿ ಆಗಂತುಕನೊಬ್ಬ ಗುಂಡಿನ ದಾಳಿ ನಡೆಸಿದ್ದು, ಅನೇಕರು ಗಾಯಗೊಂಡಿದ್ದಾರೆ. ಥಾರ್ನ್ಟನ್ ಡೆನ್ವರ್ನ್ ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಧಾವಿಸಿದ್ದು, ದಾಳಿಕೋರನ ಸದೆ ಬಡಿಯಲು ಕಾರ್ಯಾಚರಣೆ ನಡೆಸಿದ್ದಾರೆ.

ವಾಲ್ಮಾರ್ಟ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿ ನಡೆಸಿದ್ದನೆನ್ನಲಾದ ಅನುಮಾನಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಥಾನ್ಟರ್ನ್ ಪೊಲೀಸ್ ಅಧಿಕಾರಿ ವಿಕ್ಟರ್ ಅವಿಲಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...