alex Certify
ಕನ್ನಡ ದುನಿಯಾ       Mobile App
       

Kannada Duniya

ಜಗತ್ತಿನ ಜಂಜಾಟದಿಂದ ಬೇಸತ್ತವನು ಮಾಡಿದ್ದೇನು ಗೊತ್ತಾ?

ಈ ಆಧುನಿಕ ಜಗತ್ತು, ಮುಖವಾಡ ಬದುಕು, ಕಪಟ ಸಂಬಂಧ, ಜಂಟಾಟದ ಜೀವನ ಎಲ್ಲವೂ ಒಮ್ಮೊಮ್ಮೆ ಬೇಸರ ತರಿಸಿಬಿಡುತ್ತೆ. ಎಲ್ಲಿಯಾದರೂ ಓಡಿ ಹೋಗೋಣವೆನಿಸುತ್ತೆ. ಆದರೆ ಹೋಗೋದೆಲ್ಲಿಗೆ ಅಂತಾ ಸುಮ್ಮನಾಗುತ್ತೇವೆ. ಆದರೆ ಹೀಗೆಯೇ ಜೀವನದ ಮೇಲೆ ಜಿಗುಪ್ಸೆಗೊಂಡ 79 ವರ್ಷದ ವ್ಯಕ್ತಿ ಎಲ್ಲವೂ ಬಿಟ್ಟು ದ್ವೀಪವೊಂದರಲ್ಲಿ ಜೀವನ ಮಾಡಿದ್ದಾರೆ.

ಮಾರೋ ಮೊರಾಂಡಿ ಎಂಬುವವರು 1989 ರಿಂದ ಸುಮಾರು 28 ವರ್ಷಗಳ ಕಾಲ ಇಟಾಲಿಯನ್ ದ್ವೀಪವೊಂದರಲ್ಲಿ ಜೀವನ ಕಳೆದಿದ್ದಾರೆ. ಆಧುನಿಕ ಜೀವನ ಶೈಲಿಯಿಂದ ಭ್ರಮನಿರಸನಗೊಂಡಿದ್ದ ಮಾರೋ ಕೆಲ ಕಾಲ ಒಂಟಿಯಾಗಿ ಜೀವನ ಕಳೆಯಲು ಈ ನಿರ್ಧಾರ ಕೈಗೊಂಡಿದ್ದರು.

ರೋಸಿ ಸ್ಯಾಂಡಿ ಬೀಚ್ ಎಂಬ ದ್ವೀಪದಲ್ಲಿ ಅತ್ಯಂತ ಖುಷಿಯಾಗಿ ಕಾಲ ಕಳೆದರು. ಯಾರಾ ಸಂಪರ್ಕವಿಲ್ಲದೇ ಸಂತೋಷವಾಗಿದ್ದರು. ವರ್ಷಕ್ಕೆ ಕೆಲವೇ ಬಾರಿ ತನ್ನ ಮಕ್ಕಳನ್ನು ನೋಡೋಕೆ ಮೊಡೇನಾಕ್ಕೆ ತೆರಳುತ್ತಿದ್ದರು.  ಇದನ್ನೆಲ್ಲ ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಆದ್ರೆ 2016 ರಲ್ಲಿ ಈ ದ್ವೀಪವನ್ನು ಅಲ್ಲಿನ ಸರ್ಕಾರ ವಶಪಡಿಸಿಕೊಂಡು ಅದನ್ನು ಲಾ ಮಡ್ಡಲೇನಾ ನ್ಯಾಷನಲ್ ಪಾರ್ಕ್ ನ ಭಾಗವನ್ನಾಗಿ ಘೋಷಿಸಿದೆ. ಆದ್ರೆ ಈ ನ್ಯಾಷನಲ್ ಪಾರ್ಕ್ ಅಧ್ಯಕ್ಷರು ನನ್ನ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವವರೆಗೂ ತಾನು ಇಲ್ಲಿಯೇ ಇರುವುದಾಗಿ ಮಾರೋ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...