alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗಾಗುವಂತಿದೆ ಈ ಬಾಲಕನ ಅದ್ಭುತ ಸಾಹಸ..!

ಕರಾಚಿ: ಸ್ವಲ್ಪ ಕತ್ತು ನೋವಾದರೆ ಸಾಕು ತಡೆಯಲಾಗುತ್ತಿಲ್ಲ ಎಂದು ಗೊಣಗುವವರೇ ಜಾಸ್ತಿ. ಪಾಕಿಸ್ತಾನದ ಈ ಬಾಲಕ ತನ್ನ ತಲೆಯನ್ನು ಬರೋಬ್ಬರಿ 180 ಡಿಗ್ರಿಯಷ್ಟು ಅಂದರೆ, ಬೆನ್ನಿನ ಭಾಗಕ್ಕೆ ತಿರುಗಿಸುತ್ತಾನೆ. ‘ಮಾನವ ಗೊಬೆ’ ಎಂದೇ ಪ್ರಸಿದ್ಧಿಯಾಗಿದ್ದಾನೆ.

ಕರಾಚಿಯ ಈ ಬಾಲಕನ ಹೆಸರು ಮೊಹಮ್ಮದ್ ಸಮೀರ್(14). ಗೂಬೆಗಳನ್ನೂ ನಾಚಿಸುವಂತೆ ಸಮೀರ್ ತಲೆ ತಿರುಗಿಸುತ್ತಾನೆ. ಚಿಕ್ಕ ವಯಸ್ಸಿನವನಾಗಿದ್ದಾಗ ಸಮೀರ್ ಹಾರರ್ ಸಿನಿಮಾವೊಂದರಲ್ಲಿ ತಲೆಯನ್ನು ಹಿಂಭಾಗಕ್ಕೆ ತಿರುಗಿಸುವ ದೃಶ್ಯವನ್ನು ನೋಡಿದ್ದು, ಅದರಂತೆಯೇ ಪ್ರಾಕ್ಟೀಸ್ ಮಾಡಿದ್ದಾನೆ. ಕೆಲವು ತಿಂಗಳ ಬಳಿಕ ತಾನೂ ಹಿಂಭಾಗಕ್ಕೆ ತಲೆ ತಿರುಗಿಸುವಷ್ಟು ಅಭ್ಯಾಸ ಮಾಡಿಕೊಂಡಿದ್ದಾನೆ.

ಮಾಲ್ ಸೇರಿ ವಿವಿಧ ಕಡೆಗಳಲ್ಲಿ ಸಮೀರ್ ತಲೆಯನ್ನು ತಿರುಗಿಸುವ ಪ್ರದರ್ಶನ ನೀಡಿ ತಿಂಗಳಿಗೆ 100 – 120 ಡಾಲರ್ ಸಂಪಾದಿಸುತ್ತಾನೆ. ತಂದೆಯ ಅನಾರೋಗ್ಯದ ಕಾರಣ ಈತನ ಮೇಲೆಯೇ ಕುಟುಂಬದ ಜವಾಬ್ದಾರಿ ಇದೆ. ನಾಲ್ವರು ಸಹೋದರಿಯರು ಓದುತ್ತಿದ್ದಾರೆ.

ಹಾರರ್ ಸಿನಿಮಾಗಳಲ್ಲಿ ತಲೆ ತಿರುಗಿಸುವ ರೀತಿಯಲ್ಲೇ ಸಮೀರ್ ತಲೆ ತಿರುಗಿಸುವುದನ್ನು ಕಂಡವರು ಅಚ್ಚರಿಯಾಗುವುದಂತೂ ಗ್ಯಾರಂಟಿ. ಈತನಿಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕೆಂಬ ಆಸೆ ಇದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...