alex Certify
ಕನ್ನಡ ದುನಿಯಾ       Mobile App
       

Kannada Duniya

ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದ್ದಾನೆ ‘ಮೋಗ್ಲಿ’

ಮೇ 21 ರಂದು ಬಿಡುಗಡೆಯಾದ ಹಾಲಿವುಡ್ ಚಿತ್ರ ‘ಮೋಗ್ಲಿ’ ಯ ಟ್ರೈಲರ್ ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಮೂರನೆಯ ಸ್ಥಾನದಲ್ಲಿ ಟ್ರೆಂಡಿಗ್ ಆಗಿರುವ ಈ ವಿಡಿಯೋ ಕೇವಲ ಎರಡೇ ದಿನದಲ್ಲಿ 54 ಲಕ್ಷ ಬಾರಿ ವೀಕ್ಷಣೆಗೊಳಪಟ್ಟಿದೆ.

ವಾರ್ನರ್ ಬ್ರದರ್ಸ್ ಸಂಸ್ಥೆ ಸೋಮವಾರ ಆಂಡಿ ಸೆರ್ಕಿಸ್ ನಿರ್ದೇಶನದ ‘ಮೋಗ್ಲಿ’ ಚಿತ್ರದ ಮೊದಲ ಟ್ರೇಲರ್ ಅನ್ನು ಬಿಡುಗಡೆ ಮಾಡಿದ್ದು, ಪ್ರಸಿದ್ಧ ಬರಹಗಾರ ರುಡ್ಯಾರ್ಡ್ ಕಿಪ್ಲಿಂಗ್ ಭಾರತದ ಕಾಡುಗಳ ಹಿನ್ನಲೆಯಲ್ಲಿ ಮೋಗ್ಲಿಯ ಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ರೋಹನ್ ಚಂದ್ ಎಂಬ ಬಾಲಕ ಮೋಗ್ಲಿ ಪಾತ್ರವನ್ನು ನಿರ್ವಹಿಸಿದ್ದಾನೆ.

ಅಕ್ಟೋಬರ್ 19 ರಂದು ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಚಿತ್ರದ ಕಥೆ ವಿಭಿನ್ನ ಶೈಲಿಯಲ್ಲಿ ಇದೆಯಂತೆ. ಈ ಹಿಂದೆ ತೆರೆ ಕಂಡಿದ್ದ ‘ದಿ ಜಂಗಲ್ ಬುಕ್’ ಬಾಕ್ಸ್ ಆಫೀಸ್ ನಲ್ಲಿ 966 ಮಿಲಿಯನ್ ಡಾಲರ್ ಗಳಿಕೆ ಕಂಡಿತ್ತು. ಭಾರತ ಒಂದರಲ್ಲೇ ಈ ಚಿತ್ರ 250 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಬಿಡುಗಡೆಯಾಗಲಿರುವ ‘ಮೋಗ್ಲಿ’ ಚಿತ್ರ ಟ್ರೈಲರ್ ನಲ್ಲಿಯೇ ಭಾರೀ ಕುತೂಹಲ ಹುಟ್ಟಿಸಿದ್ದು, ಭರ್ಜರಿ ಗಳಿಕೆ ಕಾಣುವ ನಿರೀಕ್ಷೆ ಹುಟ್ಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...