alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಈ ತಾಯಿ ನೀಡಬಯಸಿದ್ದಾಳೆ ಅಪರೂಪದ ಉಡುಗೊರೆ…!

ತಂದೆ-ಮಗಳ ಬಾಂಧವ್ಯ ಒಂದು ಸುಂದರವಾದ ಅನುಭೂತಿ. ತಂದೆ ತನಗಾಗಿ ಮಾಡಿದ್ದನ್ನು ನೆನೆಸಿಕೊಂಡರೆ ಬಹುತೇಕ ಹೆಣ್ಣಿಗೆ ಒಂದು ಹೆಮ್ಮೆ. ಅಪ್ಪನ ಜೊತೆ ಕಳೆದ ಕ್ಷಣಗಳನ್ನು ನೆನೆಸಿಕೊಂಡರೆ ಖುಷಿ.

ತಂದೆ, ಮಗಳ ಕೈಹಿಡಿದು ನಡೆಸಿದ್ದು, ಸ್ಕೂಲಿಗೆ ಕಳಿಸಿಕೊಟ್ಟಿದ್ದು, ಶಾಪಿಂಗ್ ಗೆ ಕರೆದೊಯ್ದಿದ್ದು, ಅತ್ತಾಗ ಸಂತೈಸಿದ್ದು, ಖುಷಿಯಿಂದ ಆಡಿಸಿದ್ದು ಎಲ್ಲವೂ ಒಂದು ಸುಂದರ ಅನುಭೂತಿ. ಇಂಥ ಕ್ಷಣಗಳಿಗೆ ಸಾಕ್ಷಿಯಾಗಿ ಪೋಟೋಗಳಿದ್ದರೆ ಇನ್ನಷ್ಟು ಸಂತೋಷವಾಗದಿರಲ್ಲ. 

ಇಲ್ಲೊಬ್ಬಳು ತಾಯಿ, ತನ್ನ ಗಂಡ ಹಾಗೂ ಮಗಳ ನಡುವಿನ ಸುಂದರ ಕ್ಷಣಗಳನ್ನು ಸೆರೆಹಿಡಿದಿದ್ದಾಳೆ. ಅಪ್ಪ ಕೈ ಹಿಡಿದು ಮಗಳ ಜೊತೆ ಹೆಜ್ಜೆ ಹಾಕಿದ್ದು, ಶಾಪಿಂಗ್ ಹೋಗಿದ್ದು, ಸ್ಕೂಲ್ ಗೆ ಹೋಗಿದ್ದು ಇಂಥ ಕ್ಷಣಗಳನ್ನು ಅವರಿಗೆ ಗೊತ್ತಿಲ್ಲದಂತೆ ಸೆರೆಹಿಡಿದಿದ್ದಾಳೆ.

ಮಗಳ 18ನೇ ಹುಟ್ಟುಹಬ್ಬಕ್ಕೆ ಅಥವಾ ಆಕೆಯ ಮದುವೆಗೆ ಈ ಪೋಟೋಗಳನ್ನೊಳಗೊಂಡ ವಿಡಿಯೋವನ್ನು ಉಡುಗೊರೆಯಾಗಿ ನೀಡುವ ಆಲೋಚನೆ ಈ ತಾಯಿಯದ್ದು. ಗಂಡ ಸಾಮಾಜಿಕ ತಾಲತಾಣಗಳಲ್ಲಿರದಿದ್ದುದರಿಂದ ಆಕೆಯ ಆಲೋಚನೆಯಿನ್ನೂ ಗುಟ್ಟಾಗಿಯೇ ಇದೆ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...