alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ನೇಪಾಳಿ ಯುವತಿಯ ಫೋಟೋ

girl1_14780ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಚಾಯ್ ವಾಲಾ ಅರ್ಶದ್ ಖಾನ್ ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಆತ ರಾತ್ರೋರಾತ್ರಿ ಸೆಲೆಬ್ರಿಟಿಯಾಗಿಬಿಟ್ಟ. ಮಾಡೆಲಿಂಗ್ ಅವಕಾಶಗಳು ಆತನನ್ನು ಅರಸಿಕೊಂಡು ಬಂದಿದ್ದು, ಇದಕ್ಕೆಲ್ಲಾ ಕಾರಣವಾಗಿದ್ದು, ಇಂಟರ್ನೆಟ್ ಎಂಬ ಮಾಯಜಾಲ.

ಇದೀಗ ನೇಪಾಳಿ ಯುವತಿಯೊಬ್ಬಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಹಸ್ರಾರು ಮಂದಿ ನೆಟ್ಟಿಗರು ಇದನ್ನು ಶೇರ್ ಮಾಡಿದ್ದಾರೆ. ನೇಪಾಳದಲ್ಲಿ ತರಕಾರಿ ಮಾರಾಟ ಮಾಡುವ ಈಕೆ, ತನ್ನ ಸಹಜ ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ.

ನೇಪಾಳಿ ಛಾಯಾಗ್ರಾಹಕ ರೂಪ್ ಚಂದ್ರ ಮಹಾಜನ್ ಈ ಚಿತ್ರ ತೆಗೆದಿದ್ದು, ಇದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಬಳಿಕ #tarkariwali ಹ್ಯಾಶ್ ಟ್ಯಾಗ್ ಕೊಟ್ಟು ಸಹಸ್ರಾರು ಮಂದಿ ಇದನ್ನು ಶೇರ್ ಮಾಡಿದ್ದಾರೆ. ಸೌಂದರ್ಯ ಮತ್ತು ಶ್ರಮದ ಮಿಶ್ರಣ ಈ ಯುವತಿ ಎಂದು ಹಲವರು ಬಣ್ಣಿಸಿದ್ದಾರೆ. ಈ ಫೋಟೋ ಈಗ ವೈರಲ್ ಆಗಿರುವ ಕಾರಣ ಯುವತಿಯ ಅದೃಷ್ಟದ ಬಾಗಿಲು ಯಾವ ರೀತಿ ತೆರೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...