alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಕಾದಲ್ಲೂ ಅಭಿಮಾನಿಗಳ ನಿದ್ದೆಗೆಡಿಸಿದ ಮೌನಿ ರಾಯ್

ಕಿರುತೆರೆಯ ಸ್ಟಾರ್ ನಟಿ ಮೌನಿ ರಾಯ್ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದ್ದಾಳೆ. ದ್ವೀಪ ರಾಷ್ಟ್ರದಲ್ಲಿ ಸಖತ್ ಬೋಲ್ಡ್ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾಳೆ. ಸಾಮಾಜಿಕ ತಾಣಗಳಲ್ಲಿ ಮೌನಿಯ ವೆಕೇಶನ್ ಫೋಟೋಗಳು ಹರಿದಾಡುತ್ತಿವೆ.

ಪ್ರವಾಸ ಹೇಗಿರಬೇಕು ಅನ್ನೋದಕ್ಕೆ ಮೌನಿಯ ಫೋಟೋಗಳೇ ಬೆಸ್ಟ್ ಎಕ್ಸಾಂಪಲ್ ಎನ್ನುತ್ತಾರೆ ಅಭಿಮಾನಿಗಳು. ಸ್ವಿಮ್ಮಿಂಗ್, ಸನ್ ಬಾತ್ ಅಂತಾ ಫುಲ್ ರಿಲ್ಯಾಕ್ಸ್ ಮಾಡಿರೋ ಮೌನಿ, ಡಯಟ್ ಬದಿಗಿಟ್ಟು ರುಚಿಕರ ತಿನಿಸುಗಳನ್ನು ಸವಿದಿದ್ದಾಳೆ.

ಅಸಲಿಗೆ ಮೌನಿ ಶೂಟಿಂಗ್ ನಿಮಿತ್ತ ಲಂಕಾಗೆ ತೆರಳಿದ್ದಾಳೆ. ಆದ್ರೆ ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಆ ರಾಷ್ಟ್ರದ ಸುಂದರ ತಾಣಗಳಿಗೆ ಭೇಟಿ ನೀಡಿದ್ದಾಳೆ. ಸ್ನೇಹಿತೆಯ ಜೊತೆಗೆ ಸುತ್ತಾಡಿದ್ದಾಳೆ.

ಕ್ಯೂಂಕಿ ಸಾಸ್ ಭೀ ಕಭಿ ಬಹೂ ಥಿ, ದೇವೋಂಕಾ ದೇವ್ ಮಹಾದೇವ್ ಹಾಗೂ ನಾಗಿನ್ ಧಾರಾವಾಹಿಗಳ ಮೂಲಕ ಮೌನಿ ಫೇಮಸ್ ಆಗಿದ್ದಾಳೆ. ಝಲಕ್ ದಿಖಲಾಜಾ ಡಾನ್ಸ್ ರಿಯಾಲಿಟಿ ಶೋನಲ್ಲೂ ಮೌನಿ ಭಾಗವಹಿಸಿದ್ಲು.

ಸದ್ಯದಲ್ಲೇ ಕಿರುತೆರೆಯ ಈ ಸುಂದರಿ ಬಾಲಿವುಡ್ ಗೂ ಎಂಟ್ರಿ ಕೊಡ್ತಿದ್ದಾಳೆ. ಅಕ್ಷಯ್ ಕುಮಾರ್ ಜೊತೆಗೆ ‘ಗೋಲ್ಡ್’ ಚಿತ್ರದಲ್ಲಿ ನಟಿಸಲಿದ್ದಾಳೆ. ರೀಮಾ ಕಾಗ್ತಿ ನಿರ್ದೇಶನದ ಈ ಚಿತ್ರ 2018 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...