alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಡದ ಮಗು ಹೆತ್ತ ತಾಯಿಗೆ 77 ಕೋಟಿ ರೂ. ಪರಿಹಾರ

ವಿಕಲಚೇತನ ಮಗುವನ್ನು ಹೆತ್ತ ಮಹಿಳೆಗೆ 9 ಮಿಲಿಯನ್ ಪೌಂಡ್ ಪರಿಹಾರ ನೀಡಲಾಗಿದೆ. 2011ರ ಸೆಪ್ಟೆಂಬರ್ ನಲ್ಲಿ ಒಮೊಡೆಲೆ ಮೀಡೋಸ್ ಎಂಬ ಮಹಿಳೆ ಗರ್ಭಿಣಿಯಾಗಿದ್ಲು. ಆಕೆಯ ಹೊಟ್ಟೆಯಲ್ಲಿದ್ದ ಮಗು ಸಂಪೂರ್ಣ ವಿಲಕಚೇತನವಾಗಲಿದೆ ಅನ್ನೋದು ಗೊತ್ತಾಗಿತ್ತು.

ಆಕೆ ಗರ್ಭಪಾತ ಮಾಡಿಸಿಕೊಳ್ಳಬೇಕಿತ್ತು. ಆದ್ರೆ ವೈದ್ಯರಿಗೆ ಅದು ಗೊತ್ತಾಗಲೇ ಇಲ್ಲ. ಆಕಸ್ಮಿಕವಾಗಿ ಎಲ್ಲವೂ ಸರಿಯಾಗಿದೆಯೆಂದು ವರದಿ ನೀಡಿದ್ದರು. 2011ರ ಸೆಪ್ಟೆಂಬರ್ ನಲ್ಲಿ ಹೆರಿಗೆಯಾಗಿದ್ದು, ಅವಳಿಗೆ ಗಂಡು ಮಗು ಜನಿಸಿತ್ತು. ಮಗುವಿಗೆ ಈಗ ಆರು ವರ್ಷ. ಹೆಮೊಫಿಲಿಯಾ ಮತ್ತು ಆಟಿಸಂನಿಂದ ಬಳಲುತ್ತಿದೆ.

ಗರ್ಭಿಣಿಯಾಗುವುದಕ್ಕೂ ನಾಲ್ಕು ವರ್ಷಗಳ ಮೊದಲು ಮೀಡೋಸ್, ಹೆಮೊಫಿಲಿಯಾ ಪರೀಕ್ಷೆ ಮಾಡಿಸಿಕೊಂಡಿದ್ದಳು. ಅವಳಲ್ಲಿ ಹೆಮೊಫಿಲಿಯಾ ಜೆನೆಟಿಕ್ಸ್ ಪತ್ತೆಯಾಗಿತ್ತು. ಆದ್ರೂ ಗರ್ಭಿಣಿಯಾಗಿದ್ದ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ತಪ್ಪಾಗಿ ವರದಿ ನೀಡಲಾಗಿತ್ತು.

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಹಿಳೆ ಕೋರ್ಟ್ ಮೆಟ್ಟಿಲೇರಿದ್ದಳು. ವೈದ್ಯರು ಸರಿಯಾಗಿ ವರದಿ ಕೊಟ್ಟಿದ್ದರೆ ವಿಕಲಚೇತನ ಮಗು ಹುಟ್ಟುತ್ತಲೇ ಇರಲಿಲ್ಲ ಅಂತಾ ಆಕೆಯ ಪರ ವಕೀಲರು ವಾದ ಮಾಡಿದ್ದರು. ಅದಕ್ಕೆ ಕೋರ್ಟ್ ಕೂಡ ಸಮ್ಮತಿಸಿತ್ತು. ಆಕೆಗೆ 77 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...