alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ವಿಚಾರಣೆಯಲ್ಲಿ ಬಯಲಾಯ್ತು ಆಕೆಯ ಕರಾಳ ಕೃತ್ಯ

homestead sign

ತಾಯಿಯನ್ನು ಮಮತಾಮಯಿ, ಕರುಣಾಮಯಿ ಎಂದೆಲ್ಲಾ ಕರೆಯುತ್ತಾರೆ. ಆದರೆ, ಕ್ರೂರ ತಾಯಂದಿರು ಇರುತ್ತಾರೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನೂ ನೋಡಿರುತ್ತೀರಿ. ಇಲ್ಲೊಬ್ಬ ಮಹಾತಾಯಿ ತನ್ನ ಹಸುಗೂಸನ್ನೇ ವಿಕೃತವಾಗಿ ಕೊಂದ ಘಟನೆ ವರದಿಯಾಗಿದೆ.

ತಾಯಿಯೊಬ್ಬಳು ತನ್ನ 4 ತಿಂಗಳ ಮಗುವನ್ನು ಫ್ರೀಜರ್ ನಲ್ಲಿಟ್ಟು ಕೊಂದ ಅಮಾನವೀಯ ಘಟನೆ ಅಮೆರಿಕಾದ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ. 37 ವರ್ಷ ವಯಸ್ಸಿನ ಪೌಲಾ ವರ್ಗೆಸ್ ವರ್ಟೀಜ್ ಮಗುವನ್ನು ಕೊಂದ ಆರೋಪ ಹೊತ್ತವಳು. ಈಕೆ ಮನೆಯಲ್ಲಿದ್ದ ಫ್ರೀಜರ್ ನಲ್ಲಿ ಮಗು ಕೂರಿಸಿ ಬಾಗಿಲು ಹಾಕಿದ್ದು, ಮಗು ಅಲ್ಲೇ ಸಾವನ್ನಪ್ಪಿದೆ. ಆದರೆ, ಆಕೆ ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಮಗುವನ್ನು ಕೊಂದಿರುವುದು ಆಕೆಯ ಅರಿವಿಗೆ ಬಂದಿರಲಿಲ್ಲ. ಅಂದ ಹಾಗೇ ಈ ಪ್ರಕರಣ ಬಯಲಿಗೆ ಬಂದಿದ್ದು ಹೀಗೆ,

ಇತ್ತೀಚೆಗೆ ಪೌಲಾ ವರ್ಗೆಸ್ ವರ್ಟೀಜ್ ಸೇತುವೆ ಮೇಲಿನಿಂದ ಹಾರಲು ಮುಂದಾಗಿದ್ದಳು. ಆಕೆಯನ್ನು ಕಂಡ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಮಾನಸಿಕ ಅಸ್ವಸ್ಥೆ ಎಂಬ ಕಾರಣಕ್ಕೆ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ತನಗೆ 4 ತಿಂಗಳ ಗಂಡು ಮಗು ಇರುವುದನ್ನು ತಿಳಿಸಿ, ಅದನ್ನು ಫ್ರೀಜರ್ ನಲ್ಲಿಟ್ಟಿದ್ದು, ಮೃತಪಟ್ಟಿದೆ ಎಂದು ಹೇಳಿದ್ದಾಳೆ. ಪೊಲೀಸರು ಆಕೆಯ ಮನೆಗೆ ಹೋಗಿ ಶೋಧಿಸಿದಾಗ ಮಗು ಶವ ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...