alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಶ್ಚಿಯನ್ನರ ಕಾಶಿಯಲ್ಲಿ ಮದರ್ ತೆರೇಸಾಗೆ ಸಂತ ಪದವಿ

teresa

ವ್ಯಾಟಿಕನ್ ಸಿಟಿ: ನಿರ್ಗತಿಕರು, ಬಡವರ ಪಾಲಿನ ಮಾತೆಯಾಗಿದ್ದ ಮದರ್ ತೆರೇಸಾ ಅವರಿಗೆ, ಕ್ರಿಶ್ಚಿಯನ್ನರ ಕಾಶಿ ಎಂದೇ ಕರೆಯಲಾಗುವ ವ್ಯಾಟಿಕನ್ ಸಿಟಿಯಲ್ಲಿ ಸಂತ ಪದವಿ ಪ್ರದಾನ ಮಾಡಲಾಗಿದೆ.

ಮದರ್ ತೆರೇಸಾ ಮರಣಾನಂತರದಲ್ಲಿ 2 ಪವಾಡಗಳನ್ನು ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು, ವ್ಯಾಟಿಕನ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಂತ ಪದವಿಯನ್ನು ಪ್ರದಾನ ಮಾಡಿದ್ದಾರೆ. ಮಿಷನರೀಸ್ ಆಫ್ ಚಾರಿಟಿ ಸಂಸ್ಥೆಯ ಸಂಸ್ಥಾಪಕರಾಗಿದ್ದ ಮದರ್ ತೆರೇಸಾ ಸೇವೆಗೆ ಮತ್ತೊಂದು ಹೆಸರಾಗಿದ್ದರು. 133 ದೇಶಗಳಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ.

ಪೋಪ್ ಫ್ರಾನ್ಸಿಸ್ ಅವರು, ವ್ಯಾಟಿಕನ್ ಸಿಟಿಯಲ್ಲಿ ಮದರ್ ತೆರೇಸಾ ಅವರಿಗೆ ಸಂತ ಪದವಿ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದಿಂದ ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ಹೆಚ್.ಎಸ್. ಕೌರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಮತಾ ಬ್ಯಾನರ್ಜಿ, ಹೆಚ್ಚಿನ ಸಂಖ್ಯೆಯ ಧರ್ಮಗುರುಗಳು, ಸನ್ಯಾಸಿನಿಯರು ಪಾಲ್ಗೊಂಡಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...