alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಆಸೆ ಈಡೇರಿಸಿಕೊಳ್ಳಲು ಕಲಿಯುಗದ ತಾಯಿ ಮಾಡಿದ್ದೇನು ಗೊತ್ತಾ?

ನೈಜೀರಿಯಾದಲ್ಲಿ ಮಹಾತಾಯಿಯೊಬ್ಬಳ ಆಘಾತಕಾರಿ ಕೆಲಸ ಬೆಳಕಿಗೆ ಬಂದಿದೆ. ಸ್ಮಾರ್ಟ್ಫೋನ್ ಖರೀದಿ ಮಾಡುವ ಹುಚ್ಚಿಗೆ ಮಹಿಳೆ 6 ವಾರಗಳ ನವಜಾತ ಶಿಶುವನ್ನು ಮಾರಾಟ ಮಾಡಿದ್ದಾಳಂತೆ. ಮೆರಿಕಲ್ ಜಾನ್ಸನ್ ಹೆಸರಿನ 23 ವರ್ಷದ ಮಹಿಳೆ ಅನಾಥಾಲಯವೊಂದಕ್ಕೆ ಮಗುವನ್ನು ಮಾರಾಟ ಮಾಡಿದ್ದಾಳೆ.

ಸ್ನೇಹಿತನೊಬ್ಬನ ಮಾತಿನಂತೆ ಮೆರಿಕಲ್ ಈ ಕೆಲಸ ಮಾಡಿದ್ದಾಳಂತೆ. ಎರಡು ಮಕ್ಕಳ ತಾಯಿ ಮೆರಿಕಲ್ ಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾನಂತೆ. ಪತಿಗೆ ಸಹಾಯವಾಗಲೆಂದು ಮಗುವನ್ನು ಮಾರಾಟ ಮಾಡಿದೆ. ಮೊಬೈಲ್ ಖರೀದಿಗಾಗಿ ಮಗು ಮಾರಾಟ ಮಾಡಿಲ್ಲ. ಸ್ನೇಹಿತ ಮೊಬೈಲ್ ಖರೀದಿ ಆಸೆ ಹುಟ್ಟಿಸಿದ್ದ ಅಷ್ಟೆ ಎಂದು ಆಕೆ ಹೇಳಿದ್ದಾಳೆ. ಅನಾಥಾಲಯಕ್ಕೆ ಮಗು ಕೊಟ್ಟು ಮೆರಿಕಲ್ 39 ಸಾವಿರ ರೂಪಾಯಿ ಪಡೆದಿದ್ದಳು.

ಮಗು ಮಾರಾಟ ಮಾಡುವುದು ಮೆರಿಕಲ್ ಪತಿಗೆ ಇಷ್ಟವಿರಲಿಲ್ಲವಂತೆ. ಆದ್ರೆ ಪತಿ ಮಾತಿಗೆ ಮನ್ನಣೆ ನೀಡದೆ ಮೆರಿಕಲ್ ಈ ಕೆಲಸ ಮಾಡಿದ್ದಳಂತೆ. ಆರೋಪಿ ಮಹಿಳೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...