alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಚಿಕಿತ್ಸೆಗಾಗಿ ಎದೆಹಾಲು ಮಾರಾಟ ಮಾಡ್ತಿದ್ದಾಳೆ ತಾಯಿ

ರಸ್ತೆ ಬದಿಯಲ್ಲಿ ಎದೆಹಾಲು ಉಣಿಸುತ್ತಿರುವ ತಾಯಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 24 ವರ್ಷದ ಮಹಿಳೆ ರಸ್ತೆ ಬದಿ ಎದೆ ಹಾಲುಣಿಸುತ್ತಿದ್ದು ಸಾರ್ವಜನಿಕರಿಂದ ಹಣ ಸಂಗ್ರಹ ಮಾಡ್ತಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ಈ ಹಣವನ್ನು ಮಹಿಳೆ ಸಂಗ್ರಹಿಸುತ್ತಿದ್ದಾಳೆ.

ಮಹಿಳೆಯ ಪತಿ ಪಕ್ಕದಲ್ಲಿ ಪೋಸ್ಟರ್ ಹಿಡಿದು ನಿಂತಿದ್ದಾನೆ. ಅದ್ರಲ್ಲಿ ಎಲ್ಲ ವಯಸ್ಸಿನವರಿಗೂ ಈ ಸೇವೆ ಲಭ್ಯವೆಂದು ಬರೆಯಲಾಗಿದೆ. ಒಂದು ನಿಮಿಷ ಸ್ತನಪಾನ ಮಾಡಿಸಿದ್ರೆ 10 ಯುವಾನ್ ಹಣವನ್ನು ಮಹಿಳೆಗೆ ನೀಡಬೇಕಾಗುತ್ತದೆ. ಪೋಸ್ಟರ್ ನಲ್ಲಿ ಮಗುವಿನ ಆರೋಗ್ಯ ಸ್ಥಿತಿ, ಪಾಲಕರ ಆರ್ಥಿಕ ಸ್ಥಿತಿ ಸೇರಿದಂತೆ ಎಲ್ಲ ವಿವರಗಳನ್ನು ಬರೆಯಲಾಗಿದೆ.

ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳಂತೆ. ಆದ್ರೆ ಒಂದು ಮಗುವಿನ ಆರೋಗ್ಯ ಹದಗೆಟ್ಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಆಸ್ಪತ್ರೆ ಬಿಲ್ ತುಂಬಲು ದಂಪತಿ ಬಳಿ ಹಣವಿಲ್ಲ. ಹಾಗಾಗಿ ಎದೆಹಾಲು ಮಾರಾಟಕ್ಕೆ ಮಹಿಳೆ ಮುಂದಾಗಿದ್ದಾಳೆ. ಚೀನಾ ಸೇರಿದಂತೆ ವಿದೇಶಗಳಲ್ಲಿ ಆರ್ಥಿಕ ಸಂಕಷ್ಟದಿಂದ ಬಳಲುವ ಜನರು ಈ ರೀತಿಯ ವಿಭಿನ್ನ ಕೆಲಸಗಳಿಂದ ಹಣ ಸಂಗ್ರಹಿಸುತ್ತಾರೆ. ಕೆಲವರು ಕನ್ಯತ್ವ ಮಾರಾಟ ಮಾಡುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...