alex Certify
ಕನ್ನಡ ದುನಿಯಾ       Mobile App
       

Kannada Duniya

ಉಗುರು ಕಚ್ಚೋ ಅಭ್ಯಾಸವಿರುವವರು ಓದ್ಲೇಬೇಕಾದ ಸುದ್ದಿ

nail

ಉಗುರು ಕಚ್ಚೋದು ಅನಾರೋಗ್ಯಕರ ಅಭ್ಯಾಸ. ಇದ್ರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಶುರುವಾಗುತ್ತೆ. ಕೇವಲ ಸಣ್ಣಪುಟ್ಟ ತೊಂದರೆ ಮಾತ್ರವಲ್ಲ, ಮಕ್ಕಳಿಗೆ ಇದು ಮಾರಕವಾಗಬಹುದು. ಅಮೆರಿಕದ ಲೂಸಿಯಾನಾದಲ್ಲೂ ಇಂಥದ್ದೇ ಘಟನೆ ನಡೆದಿದೆ. ಮಹಿಳೆಯೊಬ್ಳು ಅದನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ಆಕೆಯ ಮಗನಿಗೆ ಉಗುರು ಕಚ್ಚುವ ಅಭ್ಯಾಸವಿತ್ತು.  ಹಲ್ಲಿನಿಂದ ಕಚ್ಚಿ ಉಗುರುಗಳನ್ನು ತುಂಡರಿಸಿ ಅದನ್ನಾತ ಹಲ್ಲುಗಳ ಮಧ್ಯೆ ತೂರಿಸುತ್ತಿದ್ದ. ಅದು ಚರ್ಮದ ಮಧ್ಯೆ ನುಗ್ಗಿ ಹೋಗುತ್ತಿತ್ತು. ಹಾಲು ಹಲ್ಲು ಮತ್ತು ಶಾಶ್ವತ ಹಲ್ಲುಗಳ ಮಧ್ಯೆ ಹೋಗಿ ಉಗುರಿನ ಚೂರು ಕೂತು ಬಿಡುತ್ತಿತ್ತು.

ಬಾಲಕನ ಹಲ್ಲುಗಳ ಮಧ್ಯೆ ಬಿಳಿಯ ವಸ್ತು ನೋಡಿದ ಮಹಿಳೆ, ಅದನ್ನು ಹೊರತೆಗೆದಾಗ ಶಾಕ್ ಆಗಿದ್ಲು. ಯಾಕಂದ್ರೆ ಮಗನ ಹಲ್ಲುಗಳ ಮಧ್ಯೆಯೆಲ್ಲ ಉಗುರುಗಳ ಚೂರುಗಳೇ ತುಂಬಿ ಹೋಗಿದ್ವು. ಬಾಲಕನ ಬಾಯಲ್ಲಿದ್ದ ಒಟ್ಟು 27 ಉಗುರುಗಳನ್ನು ಮಹಿಳೆ ಹೊರತೆಗೆದಿದ್ದಾಳೆ. ಉಗುರು ಕಚ್ಚುವ ಮಕ್ಕಳ ಚಟದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...