alex Certify
ಕನ್ನಡ ದುನಿಯಾ       Mobile App
       

Kannada Duniya

ಪುಟ್ಟ ಮಗ ಮಾಡಿದ ‘ಮಿಸ್ಟೇಕ್’ ಗೆ ಕಂಗಾಲಾಗಿದ್ದಾಳೆ ಈ ತಾಯಿ

ಅಮೆರಿಕಾದ ಕನ್ಸಾಸ್ ನಗರದಲ್ಲಿ ಐದು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ಮಾಡಿದ ಕೃತ್ಯವೊಂದು ಆತನ ತಾಯಿ ಕಂಗಾಲಾಗುವಂತೆ ಮಾಡಿದೆ. ಆಕೆ ಈಗ ದಿಕ್ಕು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ.

ಮಹಿಳೆ ತನ್ನ ಐದು ವರ್ಷದ ಪುತ್ರನೊಂದಿಗೆ ಓವರ್ ಲ್ಯಾಂಡ್ ಪಾರ್ಕ್ ನ ಕಮ್ಯುನಿಟಿ ಸೆಂಟರ್ ಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆಯ ಪುತ್ರ ಬೆಲೆ ಬಾಳುವ ಶಿಲ್ಪವೊಂದನ್ನು ಕೆಳಗೆ ಬೀಳಿಸಿದ್ದಾನೆ.

ಆಗಲೇ ಅಲ್ಲಿನ ಸಿಬ್ಬಂದಿ ಮಹಿಳೆ ಮತ್ತಾಕೆಯ ಮಗನನ್ನು ಅಪರಾಧಿಗಳಂತೆ ನೋಡಿದ್ದರೆನ್ನಲಾಗಿದ್ದು, ಇದೀಗ ಓವರ್ ಲ್ಯಾಂಡ್ ಪಾರ್ಕ್ ನ ಪ್ರತಿನಿಧಿಯಾಗಿರುವ ವಿಮಾ ಕಂಪನಿ ಬರೋಬ್ಬರಿ 132 ಸಾವಿರ ಡಾಲರ್ ಮೊತ್ತದ ಬಿಲ್ ಕಳಿಸಿದೆ.

ನೀವು ನಿಮ್ಮ ಪುತ್ರನನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪರಿಣಾಮ ನಮಗೆ ನಷ್ಟ ಉಂಟಾಗಿದೆ. ಹೀಗಾಗಿ ಆ ನಷ್ಟವನ್ನು ಭರಿಸುವಂತೆ ಸೂಚಿಸಲಾಗಿದೆ. ಇಷ್ಟು ಮೊತ್ತದ ಹಣವನ್ನು ಪಾವತಿಸುವುದು ಹೇಗೆ ಎಂದು ಮಹಿಳೆ ಕಂಗಾಲಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...