alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬಿಟ್ಟು ಫೇಸ್ಬುಕ್ ಫ್ರೆಂಡ್ ಜೊತೆ 9 ಮಕ್ಕಳ ತಾಯಿ….!

ಇಂಗ್ಲೆಂಡ್ ನ ಬೊಲ್ಡನ್ ನಲ್ಲಿ 9 ಮಕ್ಕಳ ತಾಯಿಯೊಬ್ಬಳು ಗಂಡನನ್ನು ಬಿಟ್ಟು ಪ್ರೇಮಿ ಬಳಿ ಹೋಗಿದ್ದಾಳೆ. ಪಶ್ಚಿಮ ಆಫ್ರಿಕಾದ ಗ್ಯಾಂಬಿಯಾಕ್ಕೆ ತೆರಳಿರುವ ಮಹಿಳೆ ಪ್ರೇಮಿ ಜೊತೆ ಹೊಸ ಜೀವನ ಶುರುಮಾಡುವ ಕನಸು ಕಂಡಿದ್ದಾಳೆ.

44 ವರ್ಷದ ಹೆಡೀ ಹೆಪ್ವರ್ತ್ ಗೆ 30 ವರ್ಷದ ಮಮೂದ್ ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಒಂದಾಗಿ ಜೀವನ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ. ಇಂಗ್ಲೆಂಡ್ ನಿಂದ ಗ್ಯಾಂಬಿಯಾಕ್ಕೆ ತೆರಳಿದ್ದಾಳೆ ಹೆಡೀ. ಹೆಡೀ ಹಾಗೂ ಮಮೂದ್ ಭೇಟಿ ಫೇಸ್ಬುಕ್ ಮೂಲಕ ಆಗಿತ್ತು ಎನ್ನಲಾಗಿದೆ.

ಮಮೂದ್ ಪತ್ನಿ ತಲೆ ಕೆಡಿಸಿದ್ದಾನೆ. 25 ವರ್ಷಗಳಿಂದ ನಾವಿಬ್ಬರೂ ಸಂಸಾರ ನಡೆಸುತ್ತಿದ್ದೇವೆ. ಮೊದಲು ಕಾಳಜಿ ವಹಿಸ್ತಿದ್ದ ಹೆಡೀ ಮಮೂದ್ ಭೇಟಿ ನಂತ್ರ ಮನೆ, ಮಕ್ಕಳ ಬಗ್ಗೆ ಗಮನ ನೀಡೋದನ್ನು ಬಿಟ್ಟಿದ್ಲು. ಸದಾ ಫೋನಿನಲ್ಲಿರುತ್ತಿದ್ದಳು ಎಂದು ಹೆಡೀ ಪತಿ ಆರೋಪ ಮಾಡಿದ್ದಾನೆ. ಮೊದಲೇ ಹೆಡೀಗೆ ಮೂರು ಮಕ್ಕಳಿದ್ದವು. ಆ ಮಕ್ಕಳನ್ನು ನಾನು ನನ್ನ ಮಕ್ಕಳಂತೆ ನೋಡಿ ಕೊಂಡಿದ್ದೆ. ಆದ್ರೀಗ ಹೆಡೀ ಎಲ್ಲ ಮಕ್ಕಳನ್ನು ಬಿಟ್ಟು ಬಾಯ್ ಫ್ರೆಂಡ್ ಜೊತೆ ಹೋಗಿದ್ದಾಳೆಂದು ಆರೋಪ ಮಾಡಿದ್ದಾರೆ.

ಆದ್ರೆ ಹೆಡೀ ಈ ಬಗ್ಗೆ ತನ್ನ ನಿರ್ಧಾರ ಸ್ಪಷ್ಟಪಡಿಸಿದ್ದಾಳೆ. ನಮ್ಮಿಬ್ಬರ ಸಂಬಂಧ ಹಳಸಿದೆ. ನನಗೆ ವಿಚ್ಛೇದನ ಬೇಕೆಂದು ಕೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...