alex Certify
ಕನ್ನಡ ದುನಿಯಾ       Mobile App
       

Kannada Duniya

16 ಗರ್ಭಪಾತಗಳ ನಂತರ ಹುಟ್ಟಿದ ಕಂದನನ್ನೂ ಕಳೆದುಕೊಂಡ ನತದೃಷ್ಟೆ

baby-dead

ವಿಧಿಯಾಟ ಅಂದ್ರೆ ಇದೇನೆ, ಅದೆಷ್ಟು ಹರಕೆ, ಪ್ರಾರ್ಥನೆ, ತಪಸ್ಸಿನ ಫಲವಾಗಿ ಹುಟ್ಟಿದ ಕೂಸನ್ನು ಕಿತ್ತುಕೊಂಡರೆ ತಾಯಿಯ ಸ್ಥಿತಿ ಹೇಗಾಗಬೇಡ ಹೇಳಿ. ಸಾಲು ಸಾಲು 16 ಗರ್ಭಪಾತದ ನಂತರ ಲಿಜ್ಜಿ ಅಲೆನ್ ಳ ಮಡಿಲು ತುಂಬಿತ್ತು. ಮುದ್ದಾದ ದೇವತೆ ಭೂಮಿಗೆ ಬಂದಿದ್ಲು. ಆ ಪುಟ್ಟ ಕಂದನಿಗೆ 15 ತಿಂಗಳು, ಪುಟಾಣಿ ಹೆಜ್ಜೆಗಳನ್ನಿಡುತ್ತ ಫ್ಲೆರ್ ರೋಸ್ ನಡೆದಾಡಲು ಆರಂಭಿಸಿದ್ಲು.

ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಬಂದಿತ್ತು, ಜ್ವರ ಕಡಿಮೆಯಾಗಿ 6 ತಾಸು ಕಳೆದಿತ್ತಷ್ಟೆ, ಕಾರ್ಡಿಯಾಕ್ ಅರೆಸ್ಟ್ ನಿಂದ ರೋಸ್ ಇಹಲೋಕ ತ್ಯಜಿಸಿದ್ದಾಳೆ. ಲಿಜ್ಜಿ ಅಲೆನ್ ಕೇಶ ವಿನ್ಯಾಸಕಿ. ಪದೇ ಪದೇ ಗರ್ಭಪಾತವಾಗಿ ಆಘಾತ ಅನುಭವಿಸಿದ್ದ ಆಕೆಯ ಬಾಳಲ್ಲಿ ಹೊಸ ಆಶಾಕಿರಣ ಮೂಡಿತ್ತು.

ಮಗಳ ಲಾಲನೆ ಪಾಲನೆಯಲ್ಲಿ ಎಲ್ಲ ನೋವನ್ನು ಮರೆತಿದ್ದ ಲಿಜ್ಜಿ ಬಾಳಲ್ಲಿ ಈಗ ಕ್ರೂರ ವಿಧಿ ಮತ್ತೆ ಆಟವಾಡಿದೆ. ಬದುಕಿನ ಸಂತೋಷವನ್ನು ಕೊಟ್ಟು ಕಸಿದುಕೊಂಡಿದೆ. ಮೆನಿಂಜೈಟಿಸ್ ಎಂಬ ಖಾಯಿಲೆ, ತನ್ನ ಕರುಳ ಕುಡಿಯನ್ನು ನುಂಗಿ ಹಾಕಿದೆ ಎಂಬುದನ್ನು ಅರ್ಥ ಮಾಡಿಕೊಂಡಿರುವ ಲಿಜ್ಜಿ, ಆ ಖಾಯಿಲೆ ಬಗ್ಗೆ ಎಲ್ಲ ತಾಯಂದಿರಲ್ಲೂ ಅರಿವು ಮೂಡಿಸಲು ಮುಂದಾಗಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...