alex Certify
ಕನ್ನಡ ದುನಿಯಾ       Mobile App
       

Kannada Duniya

18 ತಿಂಗಳ ಮಗುವಿಗೆ ಉಪ್ಪಿನ ವಿಷ ತಿನ್ನಿಸಿದ್ಲು ತಾಯಿ…!

ಜಗತ್ತು ಬದಲಾಗಿದೆ. ಮಕ್ಕಳಿಗಾಗಿ ತಾಯಿ ಪ್ರಾಣ ಬಿಡಲೂ ಸಿದ್ಧವಿರ್ತಿದ್ದ ಕಾಲ ಈಗಿಲ್ಲ. ಕೆಲ ತಾಯಂದಿರು ಪವಿತ್ರ ಸಂಬಂಧಕ್ಕೆ ಕಳಂಕ ತರುವ ಕೆಲಸ ಮಾಡ್ತಿದ್ದಾರೆ. ಹೊತ್ತು ಹೆತ್ತ ಮಕ್ಕಳಿಗೆ ವಿಷವುಣಿಸಿ ಕೊಲೆ ಮಾಡ್ತಿದ್ದಾರೆ. ಮಿತಿಗಿಂತ ಹೆಚ್ಚು ಪ್ರಮಾಣದಲ್ಲಿ ಉಪ್ಪು ತಿಂದ್ರೆ ಮಕ್ಕಳು ಸಾವನ್ನಪ್ಪುತ್ತವೆ. ಕಳೆದ ವರ್ಷ ಅಮೆರಿಕಾದಲ್ಲಿ ತಾಯಿಯೊಬ್ಬಳು ಮಗುವಿಗೆ ಅತಿ ಹೆಚ್ಚು ಉಪ್ಪು ತಿನ್ನಿಸಿ ಕೊಲೆಗೈದಿದ್ದಳು. ಈಗ ಇಂಥಹದ್ದೇ ಘಟನೆ ಇಂಗ್ಲೆಂಡ್ ನಲ್ಲಿ ನಡೆದಿದೆ.

ಇಂಗ್ಲೆಂಡ್ ನ ಮಹಿಳೆ ತನ್ನ 18 ತಿಂಗಳ ಹೆಣ್ಣು ಮಗುವಿಗೆ ಮಿತಿಗಿಂತ ಹೆಚ್ಚು ಉಪ್ಪು ತಿನ್ನಿಸಿ ಹತ್ಯೆಗೆ ಯತ್ನಿಸಿದ್ದಾಳೆ. ಈ ವಿಷ್ಯ ತಿಳಿದ ಮಗುವಿನ ಅಜ್ಜಿ ವೈದ್ಯಕೀಯ ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ತನಿಖೆಗೆ ಬಂದ ಅಧಿಕಾರಿಗಳಿಗೆ ಮಗು ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಸಿಕ್ಕಿದೆ. ಮಗುವಿನ ದೇಹ ಹಳದಿಯಾಗಿತ್ತಂತೆ.

ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮಗುವಿನ ದೇಹವನ್ನು 21ರಿಂದ 24 ಗ್ರಾಂ ಉಪ್ಪು ಸೇರಿತ್ತಂತೆ. ಮಗುವಿಗೆ ಪ್ರತಿದಿನ ಅಗತ್ಯಕ್ಕಿಂತ 12 ಪಟ್ಟು ಉಪ್ಪನ್ನು ತಿನ್ನಿಸಲಾಗುತ್ತಿತ್ತು ಎನ್ನಲಾಗಿದೆ. ಮಗುವಿಗೆ ಉಪ್ಪು ತಿನ್ನಿಸಿದ ನಂತ್ರ ತಾಯಿ ಸ್ನೇಹಿತೆಗೆ ಕರೆ ಮಾಡಿ ಮಗು ಪ್ರಜ್ಞೆ ತಪ್ಪಿದೆ ಎಂದಿದ್ದಳಂತೆ.

ವಿಚಾರಣೆ ವೇಳೆ ಪ್ರಕರಣದ ಬಗ್ಗೆ ಮಹಿಳೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಕೆ 18 ತಿಂಗಳ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಉಪ್ಪನ್ನು ನೀಡಬೇಕು ಎನ್ನುವ ಬಗ್ಗೆ ಗೂಗಲ್ ನಲ್ಲಿ ಹುಡುಕಿದ್ದಳು ಎನ್ನಲಾಗಿದೆ. ಸದ್ಯ ಬಂಧನದಲ್ಲಿರುವ ಮಹಿಳೆಗೆ 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...