alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಸರ್ಜರಿ ಬಳಿಕ ಮಗನನ್ನು ನೋಡಿ ಕಣ್ಣೀರು ಹಾಕಿದ್ಲು ತಾಯಿ

ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದ ಮಗನ ಗುರುತೇ ಸಿಗದ ತಾಯಿ ಕಣ್ಣೀರು ಹಾಕಿದ್ದಾಳೆ. 22ರ ಹರೆಯದ ನೊಪ್ಪಾಜಿತ್ ಮೊನ್ಲಿನ್ ಎಂಬ ಯುವಕನಿಗೆ ದವಡೆ ತಿರುಚಿ ಹೋಗಿತ್ತು. ಆಹಾರವನ್ನು ಸರಿಯಾಗಿ ಅಗಿಯಲು ಸಾಧ್ಯವಾಗುತ್ತಿರಲಿಲ್ಲ.

ಸಹೋದ್ಯೋಗಿಗಳೆಲ್ಲ ಅವನನ್ನು ಆಡಿಕೊಳ್ಳುತ್ತಿದ್ರು. ಇದರಿಂದ ನೊಂದಿದ್ದ ಮೊನ್ಲಿನ್ ಟಿವಿ ಶೋ ಒಂದರಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾನೆ. ‘ಲೆಟ್ ಮಿ ಇನ್ ಥೈಲ್ಯಾಂಡ್’ ಅನ್ನೋ ಕಾರ್ಯಕ್ರಮದಲ್ಲಿ ಮೊನ್ಲಿನ್ ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

ದವಡೆ, ಹಣೆ, ಕಣ್ಣಿನ ರೆಪ್ಪೆಯ ಶಸ್ತ್ರಚಿಕಿತ್ಸೆ ಜೊತೆಗೆ ಬುಟೊಕ್ಸ್ ಗೂ ಮೊನ್ಲಿನ್ ಒಳಗಾಗಿದ್ದ. ಕಾರ್ಯಕ್ರಮದಲ್ಲಿ ಮೊನ್ಲಿನ್ ನ ತಾಯಿಯನ್ನು ಕರೆಸಲಾಗಿತ್ತು. ಆತ ಸರ್ಜರಿ ಬಳಿಕ ಎಷ್ಟು ಬದಲಾಗಿದ್ದ ಅಂದ್ರೆ ಹೆತ್ತ ತಾಯಿಗೇ ಅವನ ಗುರುತು ಸಿಗಲಿಲ್ಲ.

ಇದ್ರಿಂದ ಭಾವುಕಳಾದ ಆಕೆ ಕಣ್ಣೀರು ಹಾಕಿದ್ಲು. ತನ್ನ ಕಣ್ಣನ್ನು ತಾನೇ ನಂಬಲಾಗದಂತಹ ಸ್ಥಿತಿಯಲ್ಲಿದ್ಲು. ಮೊನ್ಲಿನ್ ನನ್ನು ಮುಟ್ಟಿ ನೋಡಿ ಇದು ನೀನೇನಾ ಅಂತಾ ಪ್ರಶ್ನಿಸುತ್ತಿದ್ಲು. ಮುಖ ಸುಂದರವಾಗಿ ಕಾಣ್ತಿದ್ದಂತೆ ಎಲ್ರೂ ಮೊನ್ಲಿನ್ ಜೊತೆ ಸ್ನೇಹ ಬೆಳೆಸಲು ಆಸಕ್ತಿ ತೋರಿಸುತ್ತಿದ್ದಾರಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...