alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರುವ ಈ ಚಿತ್ರದಲ್ಲಿರೋದೇನು ಗೊತ್ತಾ..?

ಹೆಚ್ಚಿನ ಜನರಿಗೆ ಈ ಚಿತ್ರದಲ್ಲಿರುವ ಹಾವನ್ನು ಗುರುತಿಸಲು ಸಾಧ್ಯವಾಗಿಲ್ಲ. ನೀವು ಈ ಸವಾಲನ್ನು ಸ್ವೀಕರಿಸುವುದಾದರೆ, ಚಿತ್ರದಲ್ಲಿನ ಹಾವನ್ನು ಹುಡುಕಿರಿ.

ಆನ್ ಲೈನ್ ಪದಬಂಧಗಳಿಂದ ದೂರವಿರುವುದು ಕಠಿಣವೆನಿಸಿದವರಿಗೆ ಇದು ಹೇಳಿ ಮಾಡಿಸಿದಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗಿದೆ.

ಫೇಸ್ ಬುಕ್ ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಹಲವರನ್ನು ಹುಚ್ಚೆಬ್ಬಿಸಿದೆ. ಅನೇಕರು ಚಿತ್ರದಲ್ಲಿ ಹಾವನ್ನು ಹುಡುಕಾಡಿದ್ದಾರೆ. ಕೆಲವರು ಸರಿಯಾಗಿ ಗುರುತಿಸಿದರೆ, ಮತ್ತೆ ಕೆಲವರು ಹುಲ್ಲು ಹಾಸಿನ ಮೇಲಿರುವ ಪೈಪನ್ನೇ ಹಾವೆಂದು ಭಾವಿಸಿದ್ದಾರೆ.

Sunshine Coast Snake Catchers 24/7 ಪೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿರುವ ಪೋಸ್ಟ್ ನಲ್ಲಿ ಹಾವನ್ನು ಗುರುತಿಸಲು ಹೆಣಗಾಡಿದ್ದಾರೆ. ತಮಗೆ ತೋಚಿದ ಸ್ಥಳದಲ್ಲಿ ಹಾವಿದೆ ಎಂದು ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿದೆ. ನಿಮಗೆ ಹಾವು ಸರಿಯಾಗಿ ಕಾಣುತ್ತಿಲ್ಲವೆಂದಾದರೆ, ಇದೇ ಪೇಜ್ ನಲ್ಲಿ ಹಾಕಲಾಗಿರುವ ಮತ್ತೊಂದು ಚಿತ್ರದಲ್ಲಿ ಭಾರೀ ಗಾತ್ರದ ಹೆಬ್ಬಾವು ಕಾಣುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...