alex Certify
ಕನ್ನಡ ದುನಿಯಾ       Mobile App
       

Kannada Duniya

ಲಿಬಿಯಾ ಕರಾವಳಿಯಲ್ಲಿತ್ತು ಶವಗಳ ರಾಶಿ

libya-be

ಟ್ರಿಪೋಲಿ: ಲಿಬಿಯಾ ಕಡಲ ತೀರದಲ್ಲಿ ಶವಗಳ ರಾಶಿಯೇ ಕಂಡು ಬಂದಿದೆ. ಯುರೋಪ್ ಗೆ ತಲುಪುವ ಪ್ರಯತ್ನ ಫಲಿಸದೇ ವಲಸಿಗರು ಮೆಡಟರೇನಿಯನ್ ಸಮುದ್ರ ತೀರದಲ್ಲಿ ಹೆಣವಾಗಿದ್ದಾರೆ.

ಲಿಬಿಯಾದ ರಾಜಧಾನಿ ಟ್ರಪೋಲಿಯಿಂದ 45 ಕಿಲೋ ಮೀಟರ್ ದೂರದಲ್ಲಿರುವ ಝಾವಿಯಾ ಹರ್ಚ್ ಕಡಲ ತೀರದಲ್ಲಿ 70 ಶವಗಳು ಪತ್ತೆಯಾಗಿವೆ.

ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಸಮುದ್ರ ತೀರದಲ್ಲಿ ಹುಡುಕಾಟ ನಡೆಸಿದಾಗ, ಮೆಡಿಟರೇನಿಯನ್ ಸಮುದ್ರದಲ್ಲಿ ಕೆಟ್ಟು ನಿಂತಿದ್ದ ಬೋಟ್ ನಲ್ಲಿ ಶವಗಳು ಪತ್ತೆಯಾಗಿವೆ.

ಕಾರ್ಯಾಚರಣೆ ನಡೆಸಿದಂತೆ ಶವಗಳ ರಾಶಿಯೇ ಕಂಡು ಬಂದಿದೆ. ಚೀಲಗಳಲ್ಲಿಯೂ ಶವಗಳು ಕಂಡು ಬಂದಿದ್ದು, ಇನ್ನೂ ಹೆಚ್ಚಿನ ಮೃತದೇಹಗಳು ಇವೆ ಎನ್ನಲಾಗಿದೆ. ವಲಸಿಗರನ್ನು ಸಾಮೂಹಿಕ ಹತ್ಯೆ ಮಾಡಿ, ಸಮುದ್ರಕ್ಕೆ ಶವಗಳನ್ನು ಎಸೆದಿರಬಹುದೆಂದು ರೆಡ್ ಕ್ರೆಸೆಂಟ್ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...