alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಲಕ ರಹಿತ ವಾಹನದಲ್ಲಿ ಹೆಚ್ಚಾಗಲಿದೆ ಸೆಕ್ಸ್

ಮುಂದಿನ ದಿನಗಳಲ್ಲಿ ವಾಹನ ಉದ್ಯಮದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಚಾಲಕ ರಹಿತ ವಾಹನ ಮಾರುಕಟ್ಟೆಗೆ ಬರಲಿದೆ. ಇದು ವಾಹನ ಉದ್ಯಮದಲ್ಲಿ ಬದಲಾವಣೆ ತರುವುದಲ್ಲದೆ ಜನರ ಮೇಲೂ ಪರಿಣಾಮ ಬೀರಲಿದೆ.

ಈ ಬಗ್ಗೆ ಸಂಶೋಧನೆಯೊಂದು ನಡೆದಿದೆ. ಅದ್ರ ಪ್ರಕಾರ ಚಾಲಕ ರಹಿತ ವಾಹನ ಮಾರುಕಟ್ಟೆಗೆ ಬರುವುದ್ರಿಂದ ಜನರ ಸೆಕ್ಸ್ ಜೀವನದಲ್ಲಿಯೂ ಬದಲಾವಣೆಯಾಗಲಿದೆಯಂತೆ. ಸ್ವಯಂ ಚಾಲಿತ ವಾಹನದಲ್ಲಿ ಪ್ರಯಾಣಿಕರಿಗೆ ಪ್ರೈವಸಿ ಸಿಗಲಿದೆ. ರಸ್ತೆ ಮೇಲೆ ಗಮನ ನೀಡುವ ಅಗತ್ಯವಿರುವುದಿಲ್ಲ. ಹಾಗಾಗಿ ವಾಹನದಲ್ಲಿ ಸೆಕ್ಸ್ ಮಾಡೋದು ಸಾಮಾನ್ಯ ವಿಷ್ಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ Annals of Tourism Research ವರದಿ ಬಿಡುಗಡೆ ಮಾಡಿದೆ. ಸ್ವಯಂ ಚಾಲಿತ ವಾಹನದ ಬಗ್ಗೆ ಬೇರೆ ಬೇರೆ ನಗರಗಳ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದು ಉದ್ಯಮದ ಜೊತೆ ಜನರ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಪ್ರಶ್ನೆ ಕೇಳಲಾಗಿದೆ.

ಸಂಶೋಧನೆ ಪ್ರಕಾರ, ಅಮೆರಿಕಾದಲ್ಲಿ ಶೇಕಡಾ 60 ರಷ್ಟು ಮಂದಿ ಈಗಾಗಲೇ ಕಾರಿನಲ್ಲಿ ಸಂಭೋಗ ನಡೆಸಿದ್ದರಂತೆ. ಸ್ವಯಂ ಚಾಲಿತ ಕಾರು ಬಂದ್ರೆ ಇದ್ರ ಪ್ರಮಾಣ ಹೆಚ್ಚಾಗಲಿದೆ. ಜೊತೆಗೆ ಕಾರು ಲೈಂಗಿಕ ಪ್ರವಾಸೋದ್ಯಮದ ಹೊಸ ಸ್ಥಳವಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...