alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರನ ಅಂಗಳದಲ್ಲೂ ಸಿಗಲಿದೆ ಮೊಬೈಲ್ ನೆಟ್ವರ್ಕ್…!

ಮುಂದಿನ ವರ್ಷ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಸಿಗಲಿದೆ. ವೊಡಾಫೋನ್ ಜರ್ಮನಿ ಈ ಮೂನ್ ಮಿಷನ್ ಗೆ ಕೈಹಾಕಿದೆ. ನಾಸಾ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿಟ್ಟು 50 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಸ್ಪೇಸ್ ಗ್ರೇಡ್ ನೆಟ್ವರ್ಕ್ ಅಭಿವೃದ್ಧಿಪಡಿಸಲು ವೊಡಾಫೋನ್, ನೋಕಿಯಾ ಕಂಪನಿಯನ್ನು ಟೆಕ್ನಾಲಜಿ ಪಾಲುದಾರನನ್ನಾಗಿ ನೇಮಕ ಮಾಡಿಕೊಂಡಿದೆ. ಒಂದು ಚೀಲ ಸಕ್ಕರೆಗಿಂತ್ಲೂ ಕಡಿಮೆ ತೂಕವಿರುವ ಹಾರ್ಡ್ ವೇರ್ ಇದು.

ಬರ್ಲಿನ್ ಮೂಲದ ಕಂಪನಿ ಪಿಟಿಎಸ್ ಸೈಂಟಿಸ್ಟ್ಸ್ ಕೂಡ ಈ ಯೋಜನೆಗೆ ಸಹಕಾರ ನೀಡುತ್ತಿದೆ. ಕೇಪ್ ಕ್ಯಾನವರಲ್ ನಿಂದ 2019ರಲ್ಲಿ ಸ್ಪೇಸ್ ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಇದನ್ನು ಲಾಂಚ್ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ಈ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿ ಆಗಲಿದೆ. ಯಾಕಂದ್ರೆ ಚಂದ್ರನಲ್ಲೂ ಮೊಬೈಲ್ ನೆಟ್ವರ್ಕ್ ಒದಗಿಸುವುದು ನಿಜಕ್ಕೂ ಅತ್ಯಂತ ವಿನೂತನವಾದ ಪ್ರಯತ್ನ. ಚಂದ್ರನ ಅಂಗಳದಲ್ಲಿ 4ಜಿ ಅಥವಾ 5ಜಿ ನೆಟ್ವರ್ಕ್ ಲಭ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...