alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಕಾಂಡೊಮ್ ಕುರಿತ ಕುತೂಹಲದ ಸುದ್ದಿ

condom-mmm

ಲಂಡನ್: ಸುರಕ್ಷಿತ ಲೈಂಗಿಕತೆಗಾಗಿ ಕಾಂಡೊಮ್ ಬಳಸಿ ಎಂದು ಈಗಾಗಲೇ ಎಷ್ಟೋ ಜಾಹೀರಾತು, ಸಾಕ್ಷ್ಯಚಿತ್ರಗಳು ಬಂದಿವೆ.

ಈಗ ಇಂಗ್ಲೆಂಡ್ ವಿಶ್ವವಿದ್ಯಾಲಯವೊಂದು ಕಾಂಡೊಮ್ ಕುರಿತ ವಿಶೇಷ ಸಾಕ್ಷ್ಯ ಚಿತ್ರವನ್ನು ತಯಾರಿಸಲು ಸಿದ್ಧತೆ ನಡೆಸಿದೆ. ಈ ಸಾಕ್ಷ್ಯಚಿತ್ರದಲ್ಲಿ ನಟಿಸಲು 18 ರಿಂದ 25 ವರ್ಷ ವಯಸ್ಸಿನ ಜೋಡಿಗಳನ್ನು ಆಹ್ವಾನಿಸಲಾಗಿದೆ. ಇದಕ್ಕಾಗಿ ಜೋಡಿಗಳಿಗೆ ಸಂಭಾವನೆ ಕೂಡ ಕೊಡಲಾಗುವುದು. ಆಹ್ವಾನ ನೀಡಿದ ನಂತರ, 3 ಜೋಡಿಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಕಾಂಡೊಮ್ ಬಳಸುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೇ, ಪರಿಣಾಮವನ್ನೂ ಬೀರುವುದಿಲ್ಲ. ಸುರಕ್ಷಿತ ಲೈಂಗಿಕತೆಗೆ ಕಾಂಡೊಮ್ ಬಳಸಿ ಎಂದು ಸಾರಲು ಈ ಚಿತ್ರವನ್ನು ತಯಾರಿಸುತ್ತಿದ್ದು, ಇದರಲ್ಲಿ ಜೋಡಿಗಳ ಸರಸದ ಕ್ಷಣವನ್ನು ಸೆರೆ ಹಿಡಿಯಲಾಗುವುದು.

ವಿಶ್ವವಿದ್ಯಾಲಯದ ಪ್ರಾಜೆಕ್ಟ್ ಮುಖ್ಯಸ್ಥರು ಈ ಕುರಿತು ಮಾಹಿತಿ ನೀಡಿದ್ದು,  ಸುರಕ್ಷಿತ ಲೈಂಗಿಕತೆ ಬಗ್ಗೆ ಹದಿಹರೆಯದವರಲ್ಲಿ ಜಾಗೃತಿ ಮೂಡಿಸಲು ಈ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...