alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾರಥಾನ್ ನಲ್ಲಿ ಕಳೆದ್ಹೋಯ್ತು ಮಗಳ ಚಿತಾಭಸ್ಮವಿದ್ದ ನೆಕ್ಲೆಸ್

ಜಾರ್ಜಿಯಾದ ಮಹಿಳೆಯ ಪಾಲಿಗೆ ಜನವರಿ 10 ಅತ್ಯಂತ ಕರಾಳ ದಿನ. ಕಾರು ಓಡಿಸಿಕೊಂಡು ಶಾಲೆಗೆ ತೆರಳ್ತಾ ಇದ್ದ ಆಕೆಯ 17 ವರ್ಷದ ಮಗಳು ಶೆರ್ಲಿನ್ ಅಪಘಾತದಲ್ಲಿ ಮೃತಪಟ್ಟಿದ್ದಳು. ಇದೀಗ ಮಗಳ ನೆನಪಿನಾರ್ಥ ನಡೆದ ಮ್ಯಾರಥಾನ್ ವೇಳೆ, ಆಕೆಯ ಚಿತಾಭಸ್ಮವಿದ್ದ ನೆಕ್ಲೆಸ್ ಕಳೆದು ಹೋಗಿದೆ.

ಡಿಸ್ನಿ ಪ್ರಿನ್ಸೆಸ್ ಹಾಫ್ ಮ್ಯಾರಥಾನ್ ನಲ್ಲಿ ಶೆರ್ಲಿನ್ ಕೂಡ ಪಾಲ್ಗೊಳ್ಳಬೇಕಿತ್ತು. ಅದಕ್ಕಾಗಿಯೇ ಆಕೆ ಕಾಸ್ಟ್ಯೂಮ್ ಕೂಡ ತಂದಿಟ್ಟುಕೊಂಡಿದ್ದಳು. ಆದ್ರೆ ಮ್ಯಾರಥಾನ್ ಗೂ ಮೊದಲೇ ಇಹಲೋಕ ತ್ಯಜಿಸಿದ್ದಳು. ಮಗಳ ಆತ್ಮಕ್ಕೆ ಶಾಂತಿ ಕೋರಿ ತಂದೆ, ತಾಯಿ ಇಬ್ಬರೂ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದಾರೆ.

ಆದ್ರೆ ದುರದೃಷ್ಟವಶಾತ್ ಮಗಳ ನೆನಪಿಗಾಗಿ ಇಟ್ಟುಕೊಂಡಿದ್ದ ಚಿತಾಭಸ್ಮವೇ ಕಳೆದು ಹೋಗಿದೆ. ಈ ಸಂಗತಿಯನ್ನು ಶೆರ್ಲಿನ್ ತಾಯಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ಮಗಳ ಫೋಟೋವನ್ನು ಕೂಡ ಶೇರ್ ಮಾಡಿದ್ದಾರೆ. ಯಾರಿಗಾದ್ರೂ ಸಿಕ್ಕಿದ್ರೆ ಆ ನೆಕ್ಲೆಸ್ ಮರಳಿಸುವಂತೆ ಮನವಿ ಮಾಡಿದ್ದಾರೆ.

UPDATE: February 26, 2018 @ 8:35 pm My cross has NOT been found. I have spoken with noone to inform me that it has…

Posted by Chasity Foster on Sunday, February 25, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...