alex Certify
ಕನ್ನಡ ದುನಿಯಾ       Mobile App
       

Kannada Duniya

ಈಕೆ ಸೌಂದರ್ಯದ ರಹಸ್ಯವೇನು ಗೊತ್ತಾ…?

ಯಂಗ್ ಆಗಿ ಕಾಣಲು ಎಲ್ರೂ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೆ ಅದ್ಯಾವುದೂ ವರ್ಕ್ ಆಗೋದೇ ಇಲ್ಲ ಅನ್ನೋದು ಕೆಲವರ ಅಭಿಪ್ರಾಯ. ಚರ್ಮದ ಹೊಳಪು, ಸೌಂದರ್ಯ ಎಲ್ಲವೂ ಸಹಜವಾಗಿಯೇ ಬರುವಂಥದ್ದು. ಇಂಡೋನೇಷ್ಯಾದ ಈ ಮಹಿಳೆಯನ್ನೇ ನೋಡಿ, ಈಕೆಗೆ ವಯಸ್ಸೇ ಆಗುತ್ತಿಲ್ಲವೇನೋ ಎಂಬಂತಿದೆ ಅವಳ ಬ್ಯೂಟಿ.

ಜಕಾರ್ತಾ ನಿವಾಸಿ ಪುಷ್ಪಾದೇವಿ ಪಾಲಿಗೆ ವಯಸ್ಸು ಅನ್ನೋದು ಕೇವಲ ನಂಬರ್ ಅಷ್ಟೆ. ಮಗನ ಜೊತೆಗಿನ ಅವಳ ಫೋಟೋ ಕೂಡ ವೈರಲ್ ಆಗಿದೆ. ಈ ಫೋಟೋ ನೋಡಿದವರೆಲ್ಲ ಅವರಿಬ್ರೂ ಕಪಲ್ ಎಂದುಕೊಂಡಿದ್ದರಂತೆ.

ತಾಯಿ-ಮಗ ಅನ್ನೋ ಕಲ್ಪನೆಯೇ ಜನರಿಗೆ ಬಂದಿಲ್ಲ. ಅಷ್ಟು ಯಂಗ್ ಆಗಿ ಕಾಣ್ತಾಳೆ ಪುಷ್ಪಾದೇವಿ. ಪುಷ್ಪಾದೇವಿ ಫಿಟ್ನೆಸ್ ಕಡೆಗೆ ಹೆಚ್ಚು ಗಮನಕೊಡ್ತಾಳೆ. ಡಯಟ್ ಮಾಡ್ತಾಳೆ. ಯಾವಾಗ್ಲೂ ಖುಷಿಖುಷಿಯಾಗಿರ್ತಾಳೆ.

ಇದೇ ಅವಳ ಸೌಂದರ್ಯದ ರಹಸ್ಯವಂತೆ. ಯಶಸ್ವಿ ಉದ್ಯಮಿಯಾಗಿಯೂ ಆಕೆ ಗುರುತಿಸಿಕೊಂಡಿದ್ದಾಳೆ. ಅಷ್ಟಕ್ಕೂ ಅವಳ ವಯಸ್ಸೆಷ್ಟು ಗೊತ್ತಾ? 50 ವರ್ಷ. ಹೌದು 50ರಲ್ಲೂ 20ರಂತೆ ಕಾಣೋ ಚೆಲುವೆ ಈಗ ಜಾಲತಾಣಗಳಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...