alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಕ್ ಡಿ ಬರ್ಗರ್ ಕೊಂಡುಕೊಂಡ್ರೆ ಜೀವಂತ ಹುಳ ಫ್ರೀ!

mcdonalds-maggots_650x400_51502457727

ಮೆಕ್ ಡೊನಾಲ್ಡ್ಸ್ ನಲ್ಲಿ ಬರ್ಗರ್ ತಿನ್ನೋಕೆ ಎಲ್ರೂ ಮುಗಿಬೀಳ್ತಾರೆ. ಆದ್ರೆ ಈ ಸುದ್ದಿ ಓದಿದ್ಮೇಲೆ ಖಂಡಿತಾ ಮೆಕ್ ಡಿಗೆ ಹೋಗಲು ನೀವು ಹಿಂದೇಟು ಹಾಕೋದು ಗ್ಯಾರಂಟಿ. ಆಸ್ಟ್ರೇಲಿಯಾದಲ್ಲಿ ಎಮಾಲೀ ಫುಲ್ಲರ್ ಎಂಬ ಮಹಿಳೆ ಮೂರು ದಿನಗಳ ಹಿಂದೆ ಮೆಕ್ ಡೊನಾಲ್ಡ್ಸ್ ನ ಹ್ಯಾಪಿ ಮೀಲ್ ಆರ್ಡರ್ ಮಾಡಿದ್ಲು.

3 ವರ್ಷದ ತನ್ನ ಮಗನಿಗೆ ಇಷ್ಟ ಅಂತಾ ಚೀಸ್ ಬರ್ಗರ್ ತರಿಸಿದ್ಲು. ಮಗನಿಗೆ ತಿನ್ನಿಸಲು ಬರ್ಗರ್ ತೆರೆದ್ರೆ ಅದರಲ್ಲಿ ಜೀವಂತ ಹುಳಗಳು ಓಡಾಡಿಕೊಂಡಿದ್ವು. ಇದನ್ನು ನೋಡಿ ಅಸಹ್ಯಪಟ್ಟುಕೊಂಡ ಎಮಾಲೀ, ಘಟನೆ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ.

ತಾನು ಬರೀ ಬರ್ಗರ್ ಆರ್ಡರ್ ಮಾಡಿದ್ದೆ, ಜೊತೆಗೆ ಹುಳವನ್ನು ಫ್ರೀಯಾಗಿ ಕೊಟ್ಟಿದ್ದೀರಾ ಅಂತಾ ತರಾಟೆಗೆ ತೆಗೆದುಕೊಂಡಿದ್ದಾಳೆ. ಪ್ರಕರಣವನ್ನು ಇಷ್ಟಕ್ಕೇ ಬಿಡಲು ಎಮಾಲೀ ಸಿದ್ಧಳಿಲ್ಲ. ಯಾಕಂದ್ರೆ ಜನರ ಆರೋಗ್ಯದ ಜೊತೆ ಆಟವಾಡುವ ಹಕ್ಕು ಯಾರಿಗೂ ಇಲ್ಲ ಅನ್ನೋದು ಅವಳ ಅಭಿಪ್ರಾಯ.

ಸಾಕ್ಷ್ಯಕ್ಕೆ ಬೇಕು ಅಂತಾ ಹುಳಗಳಿದ್ದ ಬರ್ಗರ್ ಅನ್ನು ಫ್ರೀಝ್ ಮಾಡಿ ಇಟ್ಟಿದ್ದಾಳಂತೆ. ಇನ್ನೊಂದೆಡೆ ತಮ್ಮ ಮಳಿಗೆಯಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವೇ ಇಲ್ಲ ಅಂತಾ ಮೆಕ್ ಡೊನಾಲ್ಡ್ಸ್ ಹೇಳಿಕೊಂಡಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...