alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನಿಗೆ ಕಳಿಸಿದ್ದ ಮೆಸೇಜ್ ಪೊಲೀಸರಿಗೆ, ಮುಂದೆ..?

ಇಂಗ್ಲೆಂಡ್ ನ ಸಾಮರ್ಸೆಟ್ ನಲ್ಲಿ ತಮಾಷೆಯ ಘಟನೆಯೊಂದು ನಡೆದಿದೆ. ಲೊರ್ನಾ ಥಾಮಸ್ ಎಂಬಾಕೆ ತನ್ನ ಫೇಸ್ಬುಕ್ ಅಕೌಂಟ್ ಚೆಕ್ ಮಾಡಲು ಮುಂದಾಗಿದ್ಲು. ಆದ್ರೆ ಆಕೆಯ ಮಗ ಡೇನಿಯಲ್ ಲಾಗಿನ್ ಆಗಿದ್ದ. ಆತನ ಅಕೌಂಟ್ ಲಾಗೌಟ್ ಮಾಡಿ ತಾನು ಲಾಗಿನ್ ಆಗೋದು ಹೇಗೆ ಅಂತಾ ಲೊರ್ನಾಗೆ ಗೊತ್ತಿರಲಿಲ್ಲ.

ಮಗನ ಫೇಸ್ಬುಕ್ ಪೇಜ್ ನಿಂದ್ಲೇ ಮೆಸೇಜ್ ಮಾಡಿದ್ದಾಳೆ. ನಿನ್ನ ಅಕೌಂಟ್ ಲಾಗೌಟ್ ಮಾಡೋದು ಹೇಗೆ ಅಂತಾ ಕೇಳಿದ್ದಾಳೆ. ಆಕೆ ಕಳಿಸಿದ್ದ ಮೆಸೇಜ್ ಮಗ ಡೇನಿಯಲ್ ಬದಲು ಸಾಮರ್ಸೆಟ್ ಪೊಲೀಸರಿಗೆ ಪೋಸ್ಟ್ ಆಗ್ಬಿಟ್ಟಿದೆ. ಕೂಡಲೇ ಪೊಲೀಸ್ ಇಲಾಖೆಯಿಂದ ಆಕೆಗೆ ರಿಪ್ಲೈ ಕೂಡ ಬಂತು.

ಮಗ ಡೇನಿಯಲ್ ಬದಲು ನೀವು ಪೊಲೀಸರ ಪೇಜ್ ಗೆ ಮೆಸೇಜ್ ಮಾಡಿದ್ದೀರಾ ಅಂತಾ ತಿಳಿಸಿದ ಖಾಕಿಗಳು, ಅಕೌಂಟ್ ಲಾಗೌಟ್ ಮಾಡೋದು ಹೇಗೆ ಅಂತಾ ವಿವರಿಸಿದ್ದಾರೆ. ತನ್ನಿಂದ ತಪ್ಪಾಗಿದೆ ಅಂತಾ ಲೊರ್ನಾ ಕೂಡಲೇ ಪೊಲೀಸರ ಬಳಿ ಕ್ಷಮೆ ಕೇಳಿದ್ದಾಳೆ.

ಈ ವಿಷಯ ಗೊತ್ತಾಗಿ ಆಕೆಯ ಮಗ ಡೇನಿಯಲ್ ಕೂಡ ಪೊಲೀಸರಿಗೆ ಸಾರಿ ಹೇಳಿದ್ದಾನೆ. ನಿಮ್ಮ ಸಮಯ ವ್ಯರ್ಥ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ತನ್ನ ಅಮ್ಮನನ್ನು ಅರೆಸ್ಟ್ ಮಾಡ್ಬೇಡಿ ಅಂತಾ ಕೇಳಿಕೊಂಡಿದ್ದಾನೆ. ಈ ಪೋಸ್ಟ್ ವೈರಲ್ ಆಗಿದ್ದು, 3000ಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

hello Daniel. This is your mother . How do I get back on to my own facebook page?🙄

Nai-post ni Dan Thomas noong Huwebes, Agosto 24, 2017

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...