alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಗೆ ಸ್ನೇಹಿತನ ಸ್ಥಾನ ನೀಡಿದ್ರು ಇಸ್ರೇಲ್ ಪಿಎಂ

modi-7_w4vn5l1

ಭಾರತದ ವಿದೇಶ ನೀತಿ ಇತಿಹಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ಅಧ್ಯಯನ ಬರೆದಿದ್ದಾರೆ. ಇಸ್ರೇಲ್ ಪ್ರವಾಸ ಕೈಗೊಂಡ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೂರು ದಿನಗಳ ಇಸ್ರೇಲ್ ಪ್ರವಾಸದಲ್ಲಿರುವ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ.

ಟೆಲ್ ಅವೀವ್ ಗೆ ಹೋಗಿಳಿದ ಮೋದಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಅದ್ಧೂರಿಯಾಗಿ ಸ್ವಾಗತಿಸಿದ್ರು. ದೀರ್ಘ ಸಮಯದವರೆಗೆ ಕೈ ನೀಡಿದ್ದ ನೆತನ್ಯಾಹೂ ಮೋದಿಯವರನ್ನು ಅಪ್ಪಿ ಸ್ವಾಗತ ಕೋರಿದ್ರು. ನೆತನ್ಯಾಹೂ ಭಿನ್ನವಾಗಿ ಮೋದಿಯವರನ್ನು ಸ್ವಾಗತಿಸಿದ್ರು. ಹಿಂದಿಯಲ್ಲಿ ”ಆಪ್ ಕಾ ಸ್ವಾಗತ್ ಹೇ ಮೇರೆ ದೋಸ್ತ್” (ನನ್ನ ಸ್ನೇಹಿತ ಮೋದಿಗೆ ಸ್ವಾಗತ) ಎಂದ್ರು. ನಾವು ಭಾರತವನ್ನು ಪ್ರೀತಿಸುತ್ತೇವೆ. ಪ್ರಧಾನಮಂತ್ರಿ ಭಾರತದ ಹಾಗೂ ವಿಶ್ವದ ಮಹಾನ್ ನಾಯಕ ಎಂದು ನೆತನ್ಯಾಹು ಮೋದಿಯವರನ್ನು ಹೊಗಳಿದ್ರು.

ಇದಕ್ಕೆ ಧನ್ಯವಾದ ಹೇಳಿದ ಮೋದಿ, ಇಸ್ರೇಲ್ ನ ಹಿಬ್ರೂ ಭಾಷೆಯಲ್ಲಿ ಮೊದಲು ಮಾತನಾಡಿದ್ರು. ಇಸ್ರೇಲ್ ಗೆ ಬಂದ ಭಾರತದ ಮೊದಲ ಪ್ರಧಾನಿ ಎನಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಎರಡೂ ದೇಶಗಳು ಒಂದಾಗಿ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಬೇಕು. ಹಾಗೆ ಭಯೋತ್ಪಾದನೆ ವಿರುದ್ಧ ಒಟ್ಟಾಗಿ ಹೋರಾಡಬೇಕೆಂದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...