alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಮೂಲದವರ ಜೊತೆ ಉಪಹಾರ ಸೇವಿಸಿದ ಮೋದಿ

modi-breaks-bread-indian-workersಸೌದಿ ಅರೇಬಿಯಾಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿ ನೆಲೆಸಿರುವ ಭಾರತೀಯ ಮೂಲದ ಕೆಲಸಗಾರರನ್ನು ಭೇಟಿ ಮಾಡಿ ಅವರ ಜೊತೆ ಉಪಹಾರ ಸೇವಿಸಿದ್ದಾರೆ.

ರಿಯಾದ್ ನಲ್ಲಿ 2 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹೌಸಿಂಗ್ ಪ್ರಾಜೆಕ್ಟ್ ಕಾಮಗಾರಿಯನ್ನು ಎಲ್ ಅಂಡ್ ಟಿ ಸಂಸ್ಥೆ ಮಾಡುತ್ತಿದ್ದು, ಇಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭಾರತೀಯರು ನೆಲೆಸಿದ್ದ ಹೌಸಿಂಗ್ ಕಾಂಪ್ಲೆಕ್ಸ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು, ಸೌದಿ ಅರೇಬಿಯಾದ ಅಭಿವೃದ್ದಿಯಲ್ಲಿ ಭಾರತೀಯರ ಕೊಡುಗೆ ಆಪಾರ. ನಿಮ್ಮ ಶ್ರಮ ನನ್ನನ್ನು ಇಲ್ಲಿಗೆ ಬರುವಂತೆ ಮಾಡಿದೆ ಎಂದು ಹೇಳಿದರಲ್ಲದೇ ಅವರಲ್ಲಿ ಒಬ್ಬರಾಗಿ ಕುಳಿತು ಉಪಹಾರ ಸೇವಿಸಿದರು. ಸೌದಿ ಅರೇಬಿಯಾದಲ್ಲಿ 2.96 ಮಿಲಿಯನ್ ಭಾರತೀಯರಿದ್ದಾರೆಂದು ಹೇಳಲಾಗಿದ್ದು, ಇವರಲ್ಲಿ ಶೇ.80 ಮಂದಿ ಕಾರ್ಮಿಕರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...