alex Certify
ಕನ್ನಡ ದುನಿಯಾ       Mobile App
       

Kannada Duniya

ಮಾದಕ ವ್ಯಸನಿ ಮಾಡೆಲ್ ಬರ್ಬರ ಹತ್ಯೆ

ಡ್ರಗ್ ಸೇವಿಸಿ ಇಬ್ಬರೂ ಸೇರಿ ಮಜಾ ಮಾಡಿ ಕೊನೆಗೆ ಡ್ರಗ್ ಬಾಬ್ತು ನೀಡಬೇಕಾದ ಹಣ ಕೊಡಲ್ಲ ಎಂಬ ವಿಷಯಕ್ಕೆ ಇಬ್ಬರ ನಡುವೆ ನಡೆದ ಗಲಾಟೆ ಒಬ್ಬರ ಕೊಲೆಯಲ್ಲಿ ಅಂತ್ಯ ಕಂಡಿದೆ. ಹೀಗೆ ಕೊಲೆಯಾದವಳು ಮಾಡೆಲ್ ಕ್ರಿಸ್ಟಿನಾ ಕ್ರಾಫ್ಟ್, ಕೊಲೆಗೈದವ ಆಕೆಯ ಜೊತೆಗಾರ ಜೋನಾಥನ್ ಹ್ಯಾರಿಸ್.

ಮಾಂಟ್‍ಗೊಮೆರಿ ದೇಶದ ಅರ್ಡ್‍ಮೋರ್‍ನ ರೂಪದರ್ಶಿ ಕ್ರಿಸ್ಟಿನಾ ಕ್ರಾಫ್ಟ್‍ಗೆ ಡ್ರಗ್ ಡೀಲರ್ ಜೋನಾಥನ್ ಹ್ಯಾರಿಸ್ ಕೊಕೇನ್ ಸರಬರಾಜು ಮಾಡುತ್ತಿದ್ದ. ಹೀಗೆ ಆಗಸ್ಟ್ ತಿಂಗಳಲ್ಲಿ 1200 ಡಾಲರ್ ಬೆಲೆಯ ಕೊಕೇನ್‍ ಅನ್ನು ಇಬ್ಬರೂ ಸೇವಿಸಿ ದೇಹ ಸುಖ ಹಂಚಿಕೊಂಡಿದ್ದರು. ಬಳಿಕ ಕೊಕೇನ್‍ಗೆ ನೀಡಿದ್ದ ದುಡ್ಡಿನಲ್ಲಿ ಅರ್ಧ ಮೊತ್ತವನ್ನು ನೀಡುವಂತೆ ಜೋನಾಥನ್ ಹೇಳಿದ್ದ. ಆದರೆ ಕ್ರಿಸ್ಟಿನಾ ಅದಕ್ಕೆ ಒಪ್ಪದೆ ನಿರಾಕರಿಸಿದ್ದಳು.

ಕೊಕೇನ್ ಹಣದ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮಧ್ಯೆ ಗಲಾಟೆ ಆಗಿ, ಪರಸ್ಪರ ಹಲ್ಲೆ ನಡೆದಿದೆ. ಆದರೆ ನಾನು ಅವಳನ್ನು ಕೊಲೆ ಮಾಡಿಲ್ಲ. ಅಪಾರ್ಟ್‍ಮೆಂಟ್‍ನಿಂದ ಹೊರಬರುವಾಗ ಆಕೆ ಉಸಿರಾಡುತ್ತಿದ್ದಳು ಎಂದು ಬಂಧನಕ್ಕೀಡಾಗಿರುವ ಜೋನಾಥನ್ ಹೇಳಿಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...