alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಪಾರಾಗಿದ್ದಾಳೆ ಅಪಹರಣಕ್ಕೊಳಗಾಗಿದ್ದ ಮಾಡೆಲ್

model

ಬ್ರಿಟಿಷ್  ಮಾಡೆಲ್ ಒಬ್ಬಳನ್ನು ಅಪಹರಿಸಿದ್ದ ದುಷ್ಕರ್ಮಿಗಳು ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದರು. ಆದ್ರೆ ಆಕೆ ಒಂದು ಮಗುವಿನ ತಾಯಿ ಅನ್ನೋದು ಗೊತ್ತಾಗ್ತಿದ್ದಂತೆ ಬಿಟ್ಟು ಕಳಿಸಿದ್ದಾರೆ.

20 ವರ್ಷದ ರೂಪದರ್ಶಿ ಫೋಟೋ ಶೂಟ್ ಗೆ ಅಂತಾ ಮಿಲಾನ್ ಗೆ ಬಂದಿದ್ಲು. ಅಲ್ಲಿ ಆಕೆಯ ಮೇಲೆ ದಾಳಿ ಮಾಡಿದ ಇಬ್ಬರು, ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ರು. ನಂತರ 230,000 ಡಾಲರ್ ಗೆ ಅವಳನ್ನು ಹರಾಜಿಗಿಟ್ಟಿದ್ರು. ಅವರು ಅಪಹರಿಸಿದ್ದ ರೂಪದರ್ಶಿಗೆ ಪುಟ್ಟ ಮಗುವಿತ್ತು. ಅಂಥವರನ್ನು ಅಪಹರಿಸಿ ಹರಾಜಿಗೆ ಹಾಕುವುದು ಆ ಕ್ರಿಮಿನಲ್ ಗಳ ನಿಯಮಕ್ಕೆ ವಿರುದ್ಧವಂತೆ.

ಹಾಗಾಗಿ ಆ ಮಾಡೆಲ್ ಅನ್ನು ಬಿಟ್ಟು ಕಳಿಸಿದ್ದಾರೆ. ಆದ್ರೆ ಈ ಘಟನೆಯ ಬಗ್ಗೆ ಯಾರ ಬಳಿಯೂ ಬಾಯ್ಬಿಡಬಾರದು ಅನ್ನೋದು ದುಷ್ಕರ್ಮಿಗಳ ಕಂಡೀಷನ್. ಆ ರೂಪದರ್ಶಿಯಿಂದ್ಲೇ 37 ಲಕ್ಷ ರೂಪಾಯಿ ಹಣವನ್ನು ಕೂಡ ಪಡೆದಿದ್ದಾರೆ. ಕಾಣೆಯಾಗಿದ್ದ ಮಾಡೆಲ್ ಗಾಗಿ ಪೊಲೀಸರು ಹುಡುಕಾಟ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...