alex Certify
ಕನ್ನಡ ದುನಿಯಾ       Mobile App
       

Kannada Duniya

ರೂಪದರ್ಶಿಯ ಹೊಡೆತಕ್ಕೆ ಸತ್ತೇ ಹೋದ ನಿರಾಶ್ರಿತ…!

ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾದ ಆರೋಪವನ್ನ ಮಿಯಾಮಿಯ ಖ್ಯಾತ ಪುರುಷ ರೂಪದರ್ಶಿ ಹಿವೋ ಗೌನ್ಸ್ಲೆಸ್ ಎದುರಿಸ್ತಿದ್ದಾರೆ. ಪೆಡ್ರೋ ಕ್ರಝ್ ಎಂಬ ನಿರಾಶ್ರಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾಗಿದ್ದಕ್ಕೆ ಈಗ ಹಿವೋ ಗೌನ್ಸ್ಲೆಸ್ ಬಂಧನದ ಭೀತಿ ಎದುರಿಸುವಂತಾಗಿದೆ.

ತನ್ನ ಮೇಲೆ ಆತ ಹಲ್ಲೆ ಮಾಡಬಹುದು ಅನ್ನೋ ಕಾರಣಕ್ಕೆ ನಿರಾಶ್ರಿತನೊಬ್ಬನನ್ನು ಹಿಡಿದು ಥಳಿಸಿದ ವಿಡಿಯೋ ಒಂದು ಈಗ ಪೊಲೀಸರಿಗೆ ಲಭ್ಯವಾಗಿದ್ದು, ಹಿವೋನನ್ನ ಪೊಲೀಸರು ಬಂಧಿಸುವ ಸಾಧ್ಯತೆ ಹೆಚ್ಚಿದೆ.

ಮಿಯಾಮಿಯ ಪೆಟ್ರೋಲ್ ಬಂಕ್ ಒಂದರ ಬಳಿ ಹಿವೋ ತನ್ನ ಸ್ನೇಹಿತನೊಂದಿಗೆ ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ನಿರಾಶ್ರಿತ ವ್ಯಕ್ತಿ ಹಿವೋನಿಂದ ಧನ ಸಹಾಯ ಕೇಳಿದ್ದಾನೆ. ಈ ಸಂದರ್ಭದಲ್ಲಿ ಹಿವೋ ಆತನ ಮೇಲೆ ಕೋಪಗೊಂಡು ಆತನನ್ನು ಅಟ್ಟಿಸಿಕೊಂಡು ಹೋಗಿ ಥಳಿಸಿ ನೆಲಕ್ಕೆ ಅಪ್ಪಳಿಸಿದ್ದಾನೆ.

ಘಟನೆ ನಡೆದ ಕೆಲ ದಿನಗಳ ನಂತರ ನಿರಾಶ್ರಿತ ಮಿಯಾಮಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣದ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು ಹಿವೋ ಪರ ವಕೀಲರು ಆತನಿಗೆ ಕೊಲ್ಲುವ ಉದ್ದೇಶ ಇರಲಿಲ್ಲ. ಆತ ಗಾಯಗೊಂಡಿರಬಹುದು ಅನ್ನೋ ವಿಚಾರ ಹಿವೋಗೆ ಗೊತ್ತಿರಲಿಲ್ಲ. ಹಾಗಾಗಿ ಆತ ಕೊಲೆಗಾರ ಅಲ್ಲ ಅಂತ ವಾದ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...