alex Certify
ಕನ್ನಡ ದುನಿಯಾ       Mobile App
       

Kannada Duniya

14 ವರ್ಷದ ರೂಪದರ್ಶಿಯ ಸಾವಿಗೆ ಕಾರಣವಾಯ್ತು ಕೆಲಸದ ಒತ್ತಡ

ಮೂರು ತಿಂಗಳ ಅಸೈನ್ಮೆಂಟ್ ಗಾಗಿ ಚೀನಾಕ್ಕೆ ತೆರಳಿದ್ದ 14 ವರ್ಷದ ಮಾಡೆಲ್ ಒಬ್ಬಳು ತೀವ್ರ ಬಳಲಿಕೆಯಿಂದ ಸಾವನ್ನಪ್ಪಿದ್ದಾಳೆ. ವ್ಲಾಡಾ ಡಿಜೂಬಾ ಎಂಬ ಬಾಲಕಿ ಶಾಂಘೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಕ್ಯಾಟ್ ವಾಕ್ ಮಾಡಲು ಸಜ್ಜಾಗಿದ್ಲು. ಆದ್ರೆ ಕೆಲಹೊತ್ತಿಗೂ ಮೊದಲೇ ಕೋಮಾಕ್ಕೆ ಜಾರಿದ್ದಾಳೆ.

ಎರಡು ದಿನಗಳ ಬಳಿಕ ಮಾಡೆಲ್ ಕೊನೆಯುಸಿರೆಳೆದಿದ್ದಾಳೆ. ಕೆಲಸದ ಒತ್ತಡ ಹೆಚ್ಚಾಗಿದ್ದಿದ್ದರಿಂದ ವ್ಲಾಡಾ ಬಳಲಿದ್ದಳು. ತಾಯಿಗೆ ಕೂಡ ಕರೆ ಮಾಡಿ ತನಗೆ ತುಂಬಾ ಆಯಾಸವಾಗಿದೆ, ನಿದ್ದೆ ಮಾಡಬೇಕೆಂದು ಅಳಲು ತೋಡಿಕೊಂಡಿದ್ದಳು. ಸತತ 12 ಗಂಟೆಗಳ ಕಾಲ ಶೋ ಒಂದರಲ್ಲಿ ಪಾಲ್ಗೊಂಡಿದ್ದಾಳೆ.

ಇದರಿಂದ ವ್ಲಾಡಾಗೆ ಬಳಲಿಕೆ ಇನ್ನಷ್ಟು ಹೆಚ್ಚಾಗಿದೆ. ದೀರ್ಘಕಾಲದ ಮೆನಿಂಜೈಟಿಸ್ ಎಂಬ ಖಾಯಿಲೆಗೆ ಆಕೆ ಬಲಿಯಾಗಿದ್ದಾಳೆ. ಇನ್ನೂ ಚಿಕ್ಕ ವಯಸ್ಸಿನವಳಾಗಿದ್ದರಿಂದ ಹಿರಿಯ ಅಧಿಕಾರಿಗಳ ಬಳಿ ತನ್ನ ಸಮಸ್ಯೆ ಹೇಳಿಕೊಳ್ಳಲು ವ್ಲಾಡಾ ಹಿಂಜರಿಯುತ್ತಿದ್ದಳು. ಆಸ್ಪತ್ರೆಗೂ ಹೋಗಿರಲಿಲ್ಲ.

ಮಗಳನ್ನು ವಾಪಸ್ ಕರೆಸಿಕೊಳ್ಳಲು ಆಕೆಯ ತಾಯಿ ವೀಸಾಕ್ಕಾಗಿ ಅರ್ಜಿ ಹಾಕಿದ್ದಳು. ಆದ್ರೆ ವೀಸಾ ದೊರೆಯುವಷ್ಟರಲ್ಲೇ ಮಗಳನ್ನು ಕಳೆದುಕೊಂಡಿದ್ದಾಳೆ. ವ್ಲಾಡಾ ಸಾವಿನ ಬಗ್ಗೆ ತನಿಖೆ ನಡೆಸಲು ಮಾಸ್ಕೋದ ಅಧಿಕಾರಿಗಳು ಮುಂದಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...