alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದಲ್ಲಿ ಆರು ಗಂಟೆ ಮಾತನಾಡ್ತಿದ್ದವನ ಬಲಿ ಪಡೆಯಿತು ಮೊಬೈಲ್

mobileradiation

ಮೊಬೈಲ್ ಫೋನ್ ವ್ಯಕ್ತಿಯೊಬ್ಬನಿಗೆ ಶತ್ರುವಾಗಿದೆ. ಬ್ರಿಟನ್ ನ 44 ವರ್ಷದ ಇಯಾನ್ ಫಿಲಿಪ್ ಎಂಬಾತನನ್ನು ಮೊಬೈಲ್ ಬಲಿ ಪಡೆದಿದೆ. ಹೆಲ್ತ್ ಎಗ್ಸಿಕ್ಯೂಟಿವ್ ಆಗಿದ್ದ ಇಯಾನ್, ದಿನದಲ್ಲಿ ಆರು ಗಂಟೆ ಫೋನ್ ನಲ್ಲಿ ಮಾತನಾಡ್ತಾ ಇದ್ದ. ಆತನಿಗೆ ಫೋನ್ ನಲ್ಲಿ ಮಾತನಾಡುವುದು ಅನಿವಾರ್ಯವಾಗಿತ್ತು. ಆದ್ರೆ ಇದೇ ಮಾತು ಆತನನ್ನು ಬಲಿ ಪಡೆದಿದೆ.

ಇಯಾನ್ ಗೆ ಕೆಲವು ವರ್ಷಗಳ ಹಿಂದೆ ತಲೆನೋವು ಕಾಣಿಸಿಕೊಳ್ತಾ ಇತ್ತಂತೆ. ಒಂದು ದಿನ ಕಣ್ಣು ಮಂಜಾಗಲು ಶುರುವಾಯ್ತಂತೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂ ಆರ್ ಐ ಸ್ಕ್ಯಾನ್ ಮಾಡಲಾಯ್ತು. ಆಗ ಬ್ರೇನ್ ಟ್ಯೂಮರ್ ಆಗಿರುವುದು ತಿಳಿದು ಬಂದಿದೆ. ಸತತ 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದ್ರೂ ಇಯಾನ್ ಸಂಪೂರ್ಣ ಗುಣಮುಖನಾಗಲಿಲ್ಲ.

ದಿನದಲ್ಲಿ ಅನೇಕ ಗಂಟೆ ಮೊಬೈಲ್ ನಲ್ಲಿ ಮಾತನಾಡ್ತಾ ಇದ್ದಿದ್ದೇ ಇದಕ್ಕೆ ಕಾರಣ ಎಂದ ಇಯಾನ್, ಮೊಬೈಲ್ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶುರುಮಾಡಿದ್ದ. ರಗ್ಬಿ ಆಟಗಾರನಾಗಿದ್ದ ಇಯಾನ್ ಗೆ ಫುಟ್ಬಾಲ್ ಆಟಗಾರರ ಬೆಂಬಲ ಕೂಡ ಸಿಕ್ಕಿತ್ತು. ಮೊಬೈಲ್ ಬಳಕೆ ಅನಿವಾರ್ಯವಾಗಿದ್ದರಿಂದ ಇಯಾನ್ ರಿಸೀವರ್ ಕೂಡ ಉಪಯೋಗಿಸಿದ್ದ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಬ್ರೇನ್ ಟ್ಯೂಮರ್ ಹಾಗೂ ಮೊಬೈಲ್ ಬಳಕೆಗೆ ನಡುವೆ ಸಂಬಂಧವಿದೆಯಾ ಎನ್ನುವ ಬಗ್ಗೆ ವೈಜ್ಞಾನಿಕ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ರೋಗದ ಪ್ರಮಾಣ ಜಾಸ್ತಿಯಾಗಿರುವುದಂತೂ ಸುಳ್ಳಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...