alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮೊಬೈಲ್ ಮಾರುಕಟ್ಟೆಯಲ್ಲಿ 90 ರೂ.ಗೆ ಸಿಗುತ್ತೆ ಸ್ಮಾರ್ಟ್ಫೋನ್

mobile_sapror0-1

ಈಗ ಪ್ರತಿಯೊಬ್ಬರ ಕೈನಲ್ಲೂ ಮೊಬೈಲ್ ಇರುತ್ತೆ. ಸ್ಮಾರ್ಟ್ ಫೋನ್ ಇಲ್ಲದ ವ್ಯಕ್ತಿಯನ್ನು ಹುಡುಕಾಡುವ ಪರಿಸ್ಥಿತಿ ಇದೆ. ಈಗ ಸ್ಮಾರ್ಟ್ ಫೋನ್ ಖರೀದಿ ಅತ್ಯಂತ ಸುಲಭ. ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು.

ಕಡಿಮೆ ಆದಾಯದ ವ್ಯಕ್ತಿ ಕೂಡ ದುಬಾರಿ ಮೊಬೈಲ್ ಹಿಡಿದು ನಡೆಯುವ ಅವಕಾಶ ಸಿಗ್ತಾ ಇದೆ. ಆನ್ಲೈನ್ ಹಾಗೂ ಶಾಪ್ ಗಳಲ್ಲಿ ಮೊಬೈಲ್ ಮಾರಾಟ ನೋಡಿರ್ತೀರಾ. ಆದ್ರೆ ಬಾಂಗ್ಲಾದೇಶದಲ್ಲಿ ಮೊಬೈಲ್ ಮಾರುಕಟ್ಟೆಯೇ ಇದೆ.

ಹೌದು, ಬಾಂಗ್ಲಾದೇಶದಲ್ಲಿ ತರಕಾರಿ ಮಾರಾಟ ಮಾಡಿದಂತೆ ಮೊಬೈಲ್ ಮಾರಾಟ ಮಾಡ್ತಾರೆ. ಬಾಂಗ್ಲಾದೇಶದಲ್ಲಿ 100 ಟಾಕಾ ನೀಡಿದ್ರೆ ( 84 ರೂ.)ಸ್ಮಾರ್ಟ್ ಫೋನ್ ನಿಮ್ಮ ಕೈ ಸೇರಲಿದೆ. ಈ ಮಾರುಕಟ್ಟೆಯಲ್ಲಿ ಮೊಬೈಲ್ ಜೊತೆಗೆ ಮೊಬೈಲ್ ಗೆ ಸಂಬಂಧಿಸಿದ ಬ್ಯಾಟರಿ, ಹೆಡ್ ಫೋನ್, ಚಾರ್ಜರ್ ಕೂಡ ಸಿಗುತ್ತದೆ.

ಸಾಮಾನ್ಯವಾಗಿ ಇಲ್ಲಿ ಮಾರಾಟವಾಗುವ ಫೋನ್ ಗಳು ಚೀನಾದಾಗಿದ್ದು, ಕದ್ದು ತಂದ ಫೋನ್ ಅಥವಾ ಹಳೆ ಫೋನುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ. ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಐಫೋನ್ ಇಲ್ಲಿ ಕಡಿಮೆ ಬೆಲೆಗೆ ಮಾರಾಟವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...