alex Certify
ಕನ್ನಡ ದುನಿಯಾ       Mobile App
       

Kannada Duniya

ಈ ‘ಆಮೆ’ಯ ಸ್ಟೋರಿ ಕೇಳಿದ್ರೆ ನಕ್ಕು ಬಿಡ್ತೀರಾ…!

ಲಂಡನ್ ನ ಆಕ್ಸ್ ಫರ್ಡ್ ಗಾರ್ಡನ್ ನಿಂದ ತಪ್ಪಿಸಿಕೊಂಡಿದ್ದ ಆಮೆಯೊಂದರ ಸುದ್ದಿ ಈಗ ಬಲು ಸದ್ದು ಮಾಡಿದೆ. ಕಳೆದ ವರ್ಷದ ಜುಲೈನಲ್ಲಿ ನಾಪತ್ತೆಯಾಗಿದ್ದ ಆಮೆ ಕೊನೆಗೂ ಅದರ ಮಾಲೀಕರಿಗೆ ಸಿಕ್ಕಿದ್ದು, ಅವರು ಸಂತಸಗೊಂಡಿದ್ದಾರೆ.

ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಬಾಲಿಯೊಲ್ ಕಾಲೇಜಿನಲ್ಲಿ ಅಡುಗೆ ಸಹಾಯಕಿಯಾಗಿರುವ 50 ವರ್ಷದ ಮೋರಿಸ್ ಹಾಗೂ ಆಕೆಯ ಪುತ್ರಿ 29 ವರ್ಷದ ಲಿಯಾನಾ, 9 ವರ್ಷದ ಆಮೆ Tallulah ನ್ನು ಹಲವು ವರ್ಷಗಳಿಂದ ಸಾಕಿಕೊಂಡಿದ್ದರು.

ಆದರೆ Tallulah ಗೆ ಒಂದೇ ಸ್ಥಳದಲ್ಲಿರಲು ಬೇಸರವಾಯಿತೇನೋ? ಕಳೆದ ಜುಲೈನಲ್ಲಿ ನಗರ ಸಂಚಾರಕ್ಕೆ ಹೊರಟಿದೆ. ತಮ್ಮ ನೆಚ್ಚಿನ ಆಮೆ ಕಾಣಿಸದ ಕಾರಣ ಕಂಗಾಲಾದ ತಾಯಿ-ಮಗಳು ಎಲ್ಲೆಡೆ ಹುಡುಕಾಟ ನಡೆಸಿದ್ದಾರಲ್ಲದೇ ಪೋಸ್ಟರ್ ಮಾಡಿಸಿ ಅಕ್ಕಪಕ್ಕದ ನಿವಾಸಗಳ ಮೇಲೆ ಅಂಟಿಸಿದ್ದಾರೆ. ಆದರೆ ಇಷ್ಟು ದಿನಗಳಾದರೂ ಆಮೆ ಸಿಕ್ಕದ ಕಾರಣ ಅದರ ಆಸೆಯನ್ನೇ ತೊರೆದಿದ್ದಾರೆ.

ಆದರೆ ಕಳೆದ ಬುಧವಾರ ಬಂದ ಕರೆಯೊಂದು ಅವರಿಗೆ ಅಚ್ಚರಿಯನ್ನುಂಟು ಮಾಡಿದೆ. ಕರೆ ಮಾಡಿದಾತ ನಿಮ್ಮ ಆಮೆಯನ್ನು ಬಂದು ತೆಗೆದುಕೊಳ್ಳಿ ಎಂದಿದ್ದಾರೆ. ಅಂದ ಹಾಗೇ ಆಮೆ ಸಿಕ್ಕಿದ್ದೆಲ್ಲಿ ಅಂತೀರಾ. ಅವರ ಮನೆಯಿಂದ ಕೇವಲ 322 ಮೀಟರ್ ದೂರದಲ್ಲಿ. ಈ ಆರು ತಿಂಗಳ ಅವಧಿಯಲ್ಲಿ Tallulah ಸರಾಸರಿ ಪ್ರತಿ ಗಂಟೆಗೆ 0.00005 ಕಿ.ಮೀ. ವೇಗದಲ್ಲಿ ಚಲಿಸಿದೆ.

ಪೊದೆಗಳಿದ್ದ ಕಾರಣ ಈ ಆಮೆಗಾಗಿ ಹುಡುಕಾಟ ನಡೆಸಿದ ವೇಳೆ ಯಾರ ಕಣ್ಣಿಗೂ ಬಿದ್ದಿಲ್ಲ. ಅಲ್ಲದೇ 322 ಮೀಟರ್ ಅಂತರದ ಮಧ್ಯೆ ಮುಖ್ಯ ರಸ್ತೆಯೂ ಇದ್ದು, ವಾಹನಗಳ ಸಂಚಾರವೂ ಇರುತ್ತದೆ. ಆದರೆ ಈ ಆಮೆಗೆ ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಇದೀಗ ಆಮೆಯನ್ನು ಮರಳಿ ಪಡೆದಿರುವ ಮಾಲೀಕರು ಅದನ್ನು ಇನ್ನು ಮುಂದೆ ಬಾಕ್ಸ್ ನಲ್ಲಿ ಇರಿಸುವುದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...