alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾಗಿದ್ದ ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತ ಏಳು ತಿಂಗಳ ಬಳಿಕ ಪತ್ತೆ

ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ರಾಜಾ ಮಹಮೂದ್ ಖಾನ್ ಏಳು ತಿಂಗಳ ಬಳಿಕ ಸುರಕ್ಷಿತವಾಗಿ ಮನೆಗೆ ವಾಪಸ್ಸಾಗಿದ್ದಾರೆ. ಅಘಾಜ್- ಇ- ದೋಸ್ತಿ ಸಂಘಟನೆಯ ಸಂಚಾಲಕರಾಗಿದ್ದ ರಾಜಾ ಲಾಹೋರ್ ನ ಮನೆಯಿಂದ 2017ರ ಡಿಸೆಂಬರ್ 2 ರಂದು ಅಪಹರಣವಾಗಿದ್ದರು.

ಆನಂತರದಲ್ಲಿ ರಾಜಾ ಅವರ ಕುಟುಂಬ ಮತ್ತು ಆಪ್ತ ವಲಯ ಅವರ ಸುರಕ್ಷಿತ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಾರ್ವಜನಿಕರು ಕೂಡ ರಾಜಾ ಅವರ ಅಪಹರಣವನ್ನು ಖಂಡಿಸಿದ್ದರು. ರಾಜಕೀಯ ನಾಯಕರು ಕೂಡ ರಾಜಾ ಅವರ ಸುರಕ್ಷಿತ ಬಿಡುಗಡೆಗೆ ಸರ್ಕಾರವನ್ನ ಒತ್ತಾಯಿಸಿದ್ದರು. ಅಂದಿನಿಂದಲೂ ರಾಜಾ ಅವರ ಶೋಧ ಕಾರ್ಯವನ್ನು ಪೊಲೀಸರು ನಡೆಸುತ್ತಿದ್ದರು.

ಕಳೆದ 10 ದಿನಗಳ ಹಿಂದೆ ರಾಜಾ ಅವರನ್ನ ಪಂಜಾಬ್ ಪ್ರಾಂತ್ಯದ ಪೊಲೀಸರು ಪತ್ತೆ ಹಚ್ಚಿರೋದಾಗಿ ತಿಳಿಸಿದ್ದರು. ಈ ಸಂಬಂಧ ಹೆಚ್ಚಿನ ಮಾಹಿತಿಯನ್ನ ಅವರು ಬಿಡುಗಡೆ ಮಾಡಿರಲಿಲ್ಲ. ರಾಜಾ ಸುರಕ್ಷಿತವಾಗಿದ್ದಾರೆ ಮತ್ತು ಆರೋಗ್ಯದಿಂದಿದ್ದಾರೆ ಅನ್ನೋದ್ರ ಹೊರತಾಗಿ ಭದ್ರತಾ ಕಾರಣಗಳಿಂದಾಗಿ ಮತ್ತಾವ ಮಾಹಿತಿಯನ್ನು ನೀಡಿರಲಿಲ್ಲ.

ಆನಂತರದಲ್ಲಿ ರಾಜಾ ಅವರನ್ನ ಸುರಕ್ಷಿತವಾಗಿ ಮನೆ ತಲುಪಿಸುವಲ್ಲಿ ಪೊಲೀಸ್ ಪಡೆಗಳು ಯಶಸ್ವಿಯಾಗಿದೆ. ಭದ್ರತಾ ಕಾರಣಗಳಿಂದಾಗಿ ರಾಜಾ ಇಷ್ಟು ದಿನ ಎಲ್ಲಿದ್ದರು.? ಅವರನ್ನ ಅಪಹರಿಸಿದ್ದು ಯಾರು..? ಯಾವ ಕಾರಣಕ್ಕಾಗಿ ಅವರನ್ನ ಅಪಹರಿಸಿಲಾಗಿತ್ತು ಎಂಬ ಮಾಹಿತಿಯನ್ನ ಪೊಲೀಸರು ಬಿಡುಗಡೆ ಮಾಡಿಲ್ಲ. ಸದ್ಯ ಪಾಕಿಸ್ತಾನದಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ಬ್ಲಾಗರ್ಗಳನ್ನ ಅಪಹರಿಸುವ ಚಟುವಟಿಕೆ ಹೆಚ್ಚಾಗಿ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...