alex Certify
ಕನ್ನಡ ದುನಿಯಾ       Mobile App
       

Kannada Duniya

ನಿಗೂಢವಾಗಿ ಕಣ್ಮರೆಯಾಗಿದ್ದ ಪಾಕ್ ಪತ್ರಕರ್ತೆ 2 ವರ್ಷಗಳ ಬಳಿಕ ಪತ್ತೆ

ಪಾಕಿಸ್ತಾನದಲ್ಲಿ ಅಕ್ರಮವಾಗಿ ಬಂಧನಕ್ಕೊಳಗಾಗಿದ್ದ ಭಾರತೀಯ ಮೂಲದ ಇಂಜಿನಿಯರ್ ನೆರವಿಗೆ ಧಾವಿಸಿದ್ದ ಪಾಕಿಸ್ತಾನದ ಪತ್ರಕರ್ತೆ 2015 ರಲ್ಲಿ ಅಪರಿಚಿತರಿಂದ ಅಪಹರಣಕ್ಕೊಳಗಾಗಿದ್ದು, ಇದೀಗ ಎರಡು ವರ್ಷಗಳ ಬಳಿಕ ಆಕೆಯನ್ನು ರಕ್ಷಿಸಲಾಗಿದೆ.

ಲಾಹೋರ್ ನ 26 ವರ್ಷದ ಪತ್ರಕರ್ತೆ ಜೀನತ್ ಶೆಹಜಾದಿ ಎರಡು ವರ್ಷಗಳ ಬಳಿಕ ರಕ್ಷಿಸಲ್ಪಟ್ಟಿದ್ದು, ಈಕೆಯನ್ನು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಭಾಗದಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ಮುಂಬೈ ಮೂಲದ ಹಮೀದ್ ಅನ್ಸಾರಿ ಎಂಬಾತ ಅಫ್ಘಾನಿಸ್ತಾನದ ಮೂಲಕ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದಾನೆಂಬ ಆರೋಪದ ಮೇಲೆ ನವೆಂಬರ್ 2012 ರಲ್ಲಿ ಬಂಧನಕ್ಕೊಳಗಾಗಿದ್ದರು. ಆತನ ವಿರುದ್ದ ಬೇಹುಗಾರಿಕೆಯ ಆರೋಪವನ್ನೂ ಹೊರಿಸಲಾಗಿತ್ತು.

ತಮ್ಮ ಮಗನ ಬಿಡುಗಡೆಗಾಗಿ ಹಮೀದ್ ಅನ್ಸಾರಿಯ ತಾಯಿ ಫೌಜಿಯಾ ಅನ್ಸಾರಿ ಯತ್ನಿಸಿದ್ದು, ಪತ್ರಕರ್ತೆ ಜೀನತ್ ಶೆಹಜಾದಿ ಅವರ ನೆರವಿಗೆ ನಿಂತಿದ್ದರು. ಹಮೀದ್ ಅನ್ಸಾರಿಯ ಬಿಡುಗಡೆ ಕೋರಿ ಜೀನತ್, ಪಾಕ್ ಸುಪ್ರೀಂ ಕೋರ್ಟ್ ಮಾನವ ಹಕ್ಕು ವಿಭಾಗದ ಮೊರೆ ಹೋಗಿದ್ದು, ಈ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದ್ದ ಕೆಲವರು ಆಕೆಗೆ ಬೆದರಿಕೆಯನ್ನೂ ಒಡ್ಡಿದ್ದರು.

ಆಗಸ್ಟ್ 19, 2015 ರಂದು ಲಾಹೋರ್ ನ ಜನನಿಬಿಡ ಪ್ರದೇಶದಿಂದಲೇ ಜೀನತ್ ಶೆಹಜಾದೆಯನ್ನು ಅಪಹರಿಸಲಾಗಿತ್ತು. ಆಕೆಯನ್ನು ಅಫ್ಘಾನಿಸ್ತಾನ-ಪಾಕಿಸ್ತಾನದ ಗಡಿ ಭಾಗದಲ್ಲಿ ಬಲವಂತವಾಗಿ ಕೂಡಿಟ್ಟಿದ್ದು, ಇದೀಗ ಆಕೆಯನ್ನು ರಕ್ಷಿಸಲಾಗಿದೆ. ಎರಡು ವರ್ಷಗಳ ಬಳಿಕ ಜೀನತ್ ಕುಟುಂಬಸ್ಥರನ್ನು ಸೇರಿದ್ದಕ್ಕೆ ಆಕೆಯ ಸಹೋದರ ಹರ್ಷ ವ್ಯಕ್ತಪಡಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...