alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ ಬುಕ್ ಗೆಳೆಯನನ್ನು ಭೇಟಿ ಮಾಡಲು ಹೋಗಿ ಫಜೀತಿ

ಫೇಸ್ ಬುಕ್ ಗೆಳೆಯನೊಬ್ಬನನ್ನು ಭೇಟಿಯಾಗಲು ಹೋಗಿ ಸಿಖ್ ವ್ಯಕ್ತಿಯೊಬ್ಬ ಪಾಕಿಸ್ತಾನದಲ್ಲಿ ಫಜೀತಿ ಮಾಡಿಕೊಂಡ ಘಟನೆ ನಡೆದಿದೆ.

ಏಪ್ರಿಲ್ 12 ರಂದು ಬೈಸಾಖಿ ಹಬ್ಬವನ್ನು ಆಚರಿಸಲು 1700 ಸಿಖ್ ಭಕ್ತರೊಂದಿಗೆ ಲಾಹೋರ್ ಗೆ ತೆರಳಿದ್ದ 24 ವರ್ಷದ ಅಮರ್ಜಿತ್ ಸಿಂಗ್, ತನ್ನ ಫೇಸ್ ಬುಕ್ ಗೆಳೆಯ ರಝಾಕ್ನನ್ನು ಭೇಟಿಯಾಗಲು ತೆರಳಿದ್ದಾನೆ. ಹಬ್ಬವನ್ನು ಮುಗಿಸಿ ಭಕ್ತರೆಲ್ಲರೂ ವಾಪಸ್ಸಾಗುವಾಗ ಅಮರ್ಜಿತ್ ಕಾಣೆಯಾಗಿರುವ ಬಗ್ಗೆ ಉಳಿದವರ ಅರಿವಿಗೆ ಬಂದಿದೆ.

ಕಡೆಗೆ ಎವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ ನವರು ಅಮರ್ಜಿತ್ ನನ್ನು ಹುಡುಕಿದ್ದಾರೆ. ಆ ಬಳಿಕ ಆತನನ್ನು ಪಾಕಿಸ್ತಾನಿ ಗುಪ್ತಚರ ಇಲಾಖೆಯವರೂ ಕೂಡ ಕೆಲ ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ಆತ ಕೇವಲ ಸಿಖ್ ಭಕ್ತರಲ್ಲಿ ಒಬ್ಬನಾಗಿ ಇಲ್ಲಿಗೆ ಆಗಮಿಸಿದ್ದನೆಂಬ ಬಗ್ಗೆ ಖಾತ್ರಿಯಾದ ಬಳಿಕ ಇಂದು ಅಮರ್ಜಿತ್ ನನ್ನು ಭಾರತಕ್ಕೆ ಕಳುಹಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...