alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಿಂದ ತಪ್ಪಿಸಿಕೊಂಡಿದ್ದ ಪುಟ್ಟ ಬಾಲಕಿಯ ಜೊತೆಯಲ್ಲೇ ಇತ್ತು ನಾಯಿ

ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ ಎಂದು ಹೇಳಲಾಗುತ್ತದೆ. ಈ ಮಾತಿಗೆ ಪೂರಕವಾದ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ. ಮನೆಯಿಂದ ತಪ್ಪಿಸಿಕೊಂಡಿದ್ದ ಮೂರು ವರ್ಷದ ಬಾಲಕಿಯನ್ನು ನಾಯಿಯೊಂದು ರಾತ್ರಿಯಿಡೀ ಕಾದಿದೆ.

ಅಮೆರಿಕಾದ ಮಿಸೌರಿಯಲ್ಲಿ ಈ ಘಟನೆ ನಡೆದಿದ್ದು, ಮೂರು ವರ್ಷದ ಬಾಲಕಿ ರೆಮಿ ಎಲಿಯೆಟ್ ಎಂಬಾಕೆ ಗುರುವಾರ ರಾತ್ರಿ ಎಂಟು ಮೂವತ್ತರ ಸುಮಾರಿಗೆ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು.

ಇದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯ ಪತ್ತೆಗಾಗಿ ಸ್ವಯಂ ಸೇವಕರ ತಂಡ ಸೇರಿದಂತೆ ನೂರಾರು ಮಂದಿ ಹುಡುಕಾಟ ನಡೆಸಿದ್ದರು.

ಕಡೆಗೂ ಬಾಲಕಿ ಪತ್ತೆಯಾಗಿದ್ದು, ಅಚ್ಚರಿಯ ಸಂಗತಿಯೆಂದರೆ ಬಾಲಕಿ ಮನೆಯಲ್ಲಿ ಸಾಕಿದ್ದ ನಾಯಿ ರಾತ್ರಿಯಿಡೀ ಆಕೆಯನ್ನು ಕಾದಿದೆ. ಬಾಲಕಿ ಈಗ ಚೇತರಿಸಿಕೊಳ್ಳುತ್ತಿದ್ದು, ಆಕೆ ತಪ್ಪಿಸಿಕೊಂಡಿದ್ದೇಗೆ ಎಂಬುದರ ಕುರಿತು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...