alex Certify
ಕನ್ನಡ ದುನಿಯಾ       Mobile App
       

Kannada Duniya

ಇಸ್ರೇಲ್ ಚೆಲುವೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದೇ ತಪ್ಪಾಯ್ತು…!

ಮಿಸ್ ಇರಾಕ್ ಆಗಿ ಆಯ್ಕೆಯಾಗಿರೋ ಸಾರಾ ಅಡ್ನಾಸ್ ಕುಟುಂಬದವರು ಜೀವ ಬೆದರಿಕೆಯಿಂದ ದೇಶ ತೊರೆಯಬೇಕಾಗಿ ಬಂದಿದೆ. ಅದಕ್ಕೆ ಕಾರಣ ಏನು ಗೊತ್ತಾ? ವಿಶ್ವ ಸುಂದರಿ ಸ್ಪರ್ಧೆ ವೇಳೆ ಮಿಸ್ ಇಸ್ರೇಲ್ ಜೊತೆಗೆ ಮಿಸ್ ಇರಾಕ್ ಸಾರಾ ಸೆಲ್ಫಿ ಕ್ಲಿಕ್ಕಿಸಿಕೊಂಡಿರೋದು.

ಇರಾಕ್ ಮತ್ತು ಇಸ್ರೇಲ್ ಮಧ್ಯೆ ಯಾವುದೇ ದ್ವಿಪಕ್ಷೀಯ ಸಂಬಂಧಗಳಿಲ್ಲ. ಬಿಕಿನಿ ತೊಟ್ಟು ಮಿಸ್ ಇಸ್ರೇಲ್ ಜೊತೆಗೆ ಸಾರಾ ಕ್ಲಿಕ್ಕಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಆಕೆಯ ಪ್ರಶಸ್ತಿಯನ್ನು ನಾಶಮಾಡುವುದಾಗಿ, ಅವಳನ್ನು ಹತ್ಯೆ ಮಾಡುವುದಾಗಿ ಕಿಡಿಗೇಡಿಗಳು ಬೆದರಿಕೆ ಹಾಕಿದ್ದರು.

ಹಾಗಾಗಿ ಈ ವಿವಾದ ಶಾಂತವಾಗುವವರೆಗೆ ಆಕೆ ಇರಾಕ್ ಗೆ ಮರಳದೇ ಇರುವುದು ಒಳಿತು ಅಂತಾ ಎಲ್ಲರೂ ಸಲಹೆ ನೀಡಿದ್ದರು. ಹಾಗಾಗಿ ಸದ್ಯ ಸಾರಾ ಮತ್ತವಳ ಕುಟುಂಬಸ್ಥರು ದೇಶ ತೊರೆದಿದ್ದಾರೆ. ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿರೋ ಇಸ್ರೇಲ್ ಚೆಲುವೆ ಇಡಾನ್, ಫೋಟೋ ಕ್ಲಿಕ್ಕಿಸಿಕೊಂಡಿರುವ ಬಗ್ಗೆ ವಿಷಾದವಾಗಿಲ್ಲ ಎಂದಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...