alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ನ ಅತಿ ಎತ್ತರದ ಸೇತುವೆ ಏರಿದ್ದಾರೆ ಸಾಹಸಿ ಯುವಕರು

bridge

ಜೀವನದಲ್ಲಿ ಥ್ರಿಲ್ ಇರಬೇಕು ಅಂತಾ ಎಷ್ಟೋ ಯುವಕ- ಯುವತಿಯರು ಬಯಸ್ತಾರೆ. ಅದಕ್ಕಾಗಿ ಎಂತಹ ಅಪಾಯಕಾರಿ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇದೀಗ ನಾಲ್ವರು ಹುಡುಗರು ಇಂಗ್ಲೆಂಡ್ ನ ಅತಿ ಎತ್ತರದ ಸೇತುವೆಯನ್ನು ಏರಿದ್ದಾರೆ.

ನೈಟ್ ಸ್ಕೇಪ್ ಹೆಸರಿನಲ್ಲಿ ಈ ವಿಡಿಯೋವನ್ನು ಯುಟ್ಯೂಬ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಯುವಕರು ಏರಿರುವ ಹಂಬರ್ ಬ್ರಿಡ್ಜ್ ಬ್ರಿಟನ್ ನ ಅತ್ಯಂತ ಎತ್ತರದ ಸೇತುವೆ. ಬರೋಬ್ಬರಿ 7,283 ಅಡಿ ಎತ್ತರದಲ್ಲಿದೆ.

ಅಚ್ಚರಿಯ ವಿಚಾರ ಅಂದ್ರೆ ನಾಲ್ವರು ಯುವಕರು ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಸೇತುವೆಯನ್ನು ಹತ್ತಿದ್ದಾರೆ. ಸ್ಟಂಟ್ ಮಾಡುತ್ತಲೇ ಸರಸರನೆ ಮೇಲಕ್ಕೆ ಬಂದಿದ್ದಾರೆ. ಯುವಕರ ಈ ಸಾಹಸದ ವಿಡಿಯೋ ವೈರಲ್ ಆಗಿದೆ.

ಸುಮಾರು 3.5 ಲಕ್ಷ ಜನರು ಈಗಾಗ್ಲೇ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಯುವಕರು ಈ ಮಟ್ಟಿಗೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾಹಸ ಮಾಡಿರೋದನ್ನು ನಂಬಲು ಜನರಿಂದ ಸಾಧ್ಯವಾಗ್ತಿಲ್ಲ. ಅಲ್ಲಿನ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಹಾಕಿಕೊಳ್ಳುವ ಮುನ್ನ ನಾಲ್ವರೂ ಎಸ್ಕೇಪ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...