alex Certify
ಕನ್ನಡ ದುನಿಯಾ       Mobile App
       

Kannada Duniya

ಅಂತಿಮ ಸಂಸ್ಕಾರಕ್ಕೆ ಅಣಿಯಾಗುತ್ತಿದ್ದ ಸಮಯದಲ್ಲಿ ‘ಅತ್ತ’ ಸತ್ತ ಮಗು !

article-doc-7s1sh-xQFjRzm3477e5cc52408cec340e-55_634x340

ಕೆಲವೊಮ್ಮೆ ನಮ್ಮೊಂದಿಗೆ ನಗುನಗುತ್ತಾ ಮಾತನಾಡಿದವರು ಸ್ವಲ್ಪ ಸಮಯದಲ್ಲಿಯೇ ಇಹಲೋಕ ತ್ಯಜಿಸಿದ ಎಷ್ಟೋ ಘಟನೆಗಳು ನಮ್ಮ ಮುಂದಿವೆ. ಆದರೆ ಪುಟ್ಟ ಮಗುವೊಂದು ಸಾವನ್ನಪ್ಪಿ ಇನ್ನೇನು ಸಂಸ್ಕಾರ ನಡೆಸಬೇಕು ಎನ್ನುವಷ್ಟರಲ್ಲಿ ಕಣ್ಣು ಬಿಟ್ಟ ಅಚ್ಚರಿಯ ಘಟನೆ ಚೀನಾದಲ್ಲಿ ನಡೆದಿದೆ.

ಹೌದು. ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ಈ ಕುತೂಹಲಕಾರಿ ಘಟನೆ ನಡೆದಿದ್ದು, 9 ತಿಂಗಳ ಮುನ್ನವೇ ಜನಿಸಿದ ಮಗುವಿನ ಹೃದಯ ಬಡಿತ ನಿಂತ ಕಾರಣ ಅದು ಸಾವನ್ನಪ್ಪಿದೆ ಎಂದು ಆಸ್ಪತ್ರೆಯ ವೈದ್ಯರು ಘೋಷಿಸಿದ್ದರು.

ಹಾಗಾಗಿ -12 ಡಿಗ್ರಿ ತಾಪಮಾನವಿರುವ ಶವಾಗಾರದ ಕೋಣೆಯಲ್ಲಿ ಮಗುವನ್ನು ಇರಿಸಿ ಸುಮಾರು 15 ತಾಸು ಕಳೆದಿತ್ತು. ಅದನ್ನು ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಮಗು ಅಳಲು ಆರಂಭಿಸಿದ್ದು, ತಕ್ಷಣ ಪೋಷಕರು ಮಗುವನ್ನು ಪುನಃ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಮಗು ಈಗ ಆರೋಗ್ಯವಾಗಿದೆ ಎನ್ನಲಾಗಿದೆ. ಮಗುವಿನ ಪುನರ್ಜನ್ಮಕ್ಕೆ ಸಂತಸ ವ್ಯಕ್ತಪಡಿಸಿರುವ ಪೋಷಕರು, ಇದೊಂದು ಪವಾಡ. ನಂಬಲೇ ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...