alex Certify
ಕನ್ನಡ ದುನಿಯಾ       Mobile App
       

Kannada Duniya

ನಿವೃತ್ತಿಗೂ ನಿಮಿಷ ಮೊದಲು ಮೇಲಾಧಿಕಾರಿಗಳ ಚಳಿ ಬಿಡಿಸಿದ ಉದ್ಯೋಗಿ

retire

ಮೈಖೆಲ್ ಸ್ಟಬನ್ ‘ಪೆನ್ಸಿಲ್ವೇನಿಯಾ ಟರ್ನ್ ಪಿಕೆ ಕಮಿಷನ್’ನಲ್ಲಿ ಉದ್ಯೋಗಿಯಾಗಿದ್ರು. 35 ವರ್ಷಗಳ ಸೇವೆ ಬಳಿಕ ಇತ್ತೀಚೆಗಷ್ಟೆ ನಿವೃತ್ತರಾಗಿದ್ದಾರೆ.

ಎಲ್ಲರಂತೆ ಮೈಖೆಲ್ ಕೂಡ ತಮ್ಮ ನೌಕರಿ, ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳ ಬಗ್ಗೆ ಅಸಮಾಧಾನ ಹೊಂದಿದ್ರು. ಆದ್ರೆ ರಿಟೈರ್ ಆಗುವ ನಿಮಿಷಗಳ ಮೊದಲು ಮೈಖೆಲ್ ತಮ್ಮ ಕೊನೆಯ ಪ್ರಶ್ನೋತ್ತರವನ್ನು ಬರೆಯುತ್ತ ಹಿರಿಯ ಅಧಿಕಾರಿಗಳಿಗೆ ಮಂಗಳಾರತಿ ಮಾಡಿದ್ದಾರೆ.

ಈ ಕೆಲಸ ಬಿಡುವುದು ಅವರಿಗೆ ಇಷ್ಟವಿರಲಿಲ್ಲ, ಆದ್ರೆ ಕಳೆದ 5 ವರ್ಷಗಳಲ್ಲಿ ಎಂತಹ ಭಯಾನಕ ಅನುಭವ ತಮಗಾಗಿದೆ ಅನ್ನೋದನ್ನು 58 ವರ್ಷದ ಮೈಖೆಲ್ ವಿವರಿಸಿದ್ದಾರೆ. ಎಲ್ಲದರಲ್ಲೂ ರಾಜಕೀಯ, ಉದ್ಯೋಗ ಮತ್ತು ಪ್ರಮೋಷನ್ ಎರಡನ್ನೂ ಭರ್ತಿ ಮಾಡುತ್ತಿದ್ದವರು ರಾಜಕಾರಣಿಗಳು. ಅರ್ಹತೆಯಿಲ್ಲದವರಿಗೆ ಉನ್ನತ ಹುದ್ದೆ ಹೀಗೆ ಮೇಲಾಧಿಕಾರಿಗಳು ಮಾಡಿದ ಒಂದೊಂದೇ ಅಕ್ರಮವನ್ನು ಮೈಖೆಲ್ ಬಯಲಿಗೆಳೆದಿದ್ದಾರೆ.

ಅರ್ಹರಿಗೆ ಆಗುತ್ತಿರುವ ಅನ್ಯಾಯ, ಪ್ರಭಾವಿಗಳ ಕೈವಾಡ ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಂಪನಿಯ ಎಚ್ ಆರ್ ಗೆ ಮಾತ್ರವಲ್ಲ 2000 ನೌಕರರನ್ನೂ ಸಂಭೋದಿಸಿ ಇ-ಮೇಲ್ ರವಾನಿಸಿದ್ದಾರೆ. ಇ-ಮೇಲ್ ವೈರಲ್ ಆಗಿದ್ದು, ಸಾವಿರಾರು ಮಂದಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡ್ರೆ ಇನ್ನು ಕೆಲವರು ಮೈಖೆಲ್ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಸಹಜವಾಗಿಯೇ ಮ್ಯಾನೇಜರ್ ಗಳಿಗೆ ಇದು ಇಷ್ಟವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...