alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಿಳೆಗೆ ಪತಿಯೂ ಅಲರ್ಜಿ..!

18_11_2016-alr

ಕೆಲವರಿಗೆ ಧೂಳು ಅಲರ್ಜಿ. ಮತ್ತೆ ಕೆಲವರಿಗೆ ಸೋಪ್ ಅಲರ್ಜಿ. ಹೀಗೆ ಅನೇಕರು ಅಲರ್ಜಿ ಸಮಸ್ಯೆಯಿಂದ ಬಳಲ್ತಾರೆ. ಆದ್ರೆ ಅಮೆರಿಕಾದ ಜೊವಾನ್ನಾ ವಾಟ್ಕಿನ್ಸ್ ಗೆ ವಿಚಿತ್ರ ಅಲರ್ಜಿ ಖಾಯಿಲೆ ಇದೆ. ಈಕೆಗೆ ಎಲ್ಲವೂ ಅಲರ್ಜಿ. ಹಾಗಾಗಿ ಕಳೆದೊಂದು ವರ್ಷದಿಂದ ಒಂದೇ ರೂಮಿನಲ್ಲಿ ಬಂಧಿಯಾಗಿದ್ದಾಳೆ ಈಕೆ.

ಸಣ್ಣ ಧೂಳಿನ ಕಣ ಒಳಗೆ ಹೋಗದಂತೆ ರೂಮನ್ನು ಬಂದೋಬಸ್ತ್ ಮಾಡಿದ್ದಾನೆ ಆಕೆಯ ಪತಿ. ಪತಿಯ ವಾಸನೆಯೂ ಆಕೆಗೆ ಅಲರ್ಜಿ. ಹಾಗಾಗಿ ಆತ ಬೇರೆ ರೂಮಿನಲ್ಲಿ ವಾಸವಾಗಿದ್ದಾನೆ. ಪ್ರತಿದಿನ ಒಂದೇ ರೀತಿಯ ಆಹಾರ ಸೇವನೆ ಮಾಡ್ತಿದ್ದಾಳೆ. ವೈದ್ಯರ ಭೇಟಿಗೆ ಆಸ್ಪತ್ರೆಗೆ ಹೋಗುವುದು ಕಷ್ಟವಾಗಿದೆ. ಮನೆಯಿಂದ ಹೊರಬಿದ್ರೆ ತೀವ್ರ ನೋವು ಹಾಗೂ ಕಿರಿಕಿರಿಯುಂಟಾಗುತ್ತದೆಯಂತೆ.

ಈಗಾಗಲೇ 30 ಕ್ಕೂ ಹೆಚ್ಚು ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಯಾವೊಬ್ಬ ವೈದ್ಯರೂ ಅಲರ್ಜಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಿಲ್ಲ. ಮಸ್ಟ್ ಸೆಲ್ ಆ್ಯಕ್ಟಿವೇಶನ್ ಸಿಂಡ್ರೋಮಾ ಎಂಬ ಖಾಯಿಲೆಯಿಂದ ಈಕೆ ಬಳಲುತ್ತಿದ್ದಾಳೆಂದು ವೈದ್ಯರೊಬ್ಬರು ಅಂದಾಜಿಸಿದ್ದಾರೆ.

ಆದ್ರೆ ಈ ರೋಗಕ್ಕೆ ಈವರೆಗೂ ಔಷಧಿ ಕಂಡುಹಿಡಿದಿಲ್ಲ. ಕಳೆದ 9 ವರ್ಷಗಳ ಹಿಂದಷ್ಟೇ ಈ ರೋಗ ಲಕ್ಷಣ ಪತ್ತೆಯಾಗಿದೆ. ರೋಗದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇಕಡಾ 15ರಷ್ಟು ಮಂದಿ ಈ ರೋಗದಿಂದ ಬಳಲುವ ಸಾಧ್ಯತೆ ಇದೆ ಎಂದು ವೈದ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...