alex Certify
ಕನ್ನಡ ದುನಿಯಾ       Mobile App
       

Kannada Duniya

ನೈಜೀರಿಯಾದಲ್ಲಿ ಕೋಟ್ಯಾಂತರ ರೂಪಾಯಿ ಗೋಲ್ಮಾಲ್, ಆರೋಪಿ ಹಾವು ಮತ್ತು ಕೋತಿ…!

ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಅನ್ನೋ ಮಾತಿದೆ. ನೈಜೀರಿಯಾದ ವಂಚಕರು ಈ ಮಾತನ್ನು ಅಕ್ಷರಶಃ ಪಾಲಿಸ್ತಿದ್ದಾರೆ. ಭ್ರಷ್ಟಾಚಾರಕ್ಕೆ ಹಾವು, ಮಂಗಗಳೇ ಕಾರಣ ಅಂತಾ ತಿಪ್ಪೆ ಸಾರಿಸೋ ಕೆಲಸ ಮಾಡ್ತಿದ್ದಾರೆ.

ಇತ್ತೀಚೆಗಷ್ಟೆ ಲಂಚ ಪಡೆದ ಆರೋಪದ ಮೇಲೆ ಸೇಲ್ಸ್ ಕ್ಲರ್ಕ್ ಒಬ್ಬಳನ್ನು ವಜಾ ಮಾಡಲಾಗಿತ್ತು. ಆಕೆ ತನ್ನ ಬಳಿಯಿದ್ದ ಸುಮಾರು 1 ಲಕ್ಷ ಡಾಲರ್ ಹಣವನ್ನು ಹಾವು ನುಂಗಿಬಿಟ್ಟಿದೆ ಅಂತಾ ಹೇಳಿಕೊಂಡಿದ್ಲು.

ಈ ಘಟನೆ ನಡೆದು ವಾರದ ಬಳಿಕ ಸೆನೆಟರ್ ಒಬ್ಬ ತನ್ನ ಫಾರ್ಮ್ ಹೌಸ್ ನಲ್ಲಿದ್ದ 1,94,600 ಡಾಲರ್ ಹಣವನ್ನು ಕೋತಿ ಎತ್ತಿಕೊಂಡು ಹೋಗಿದೆ ಅಂತಾ ಹೇಳಿದ್ದಾನೆ. ಆದ್ರೆ ತನಿಖಾಧಿಕಾರಿಗಳ ಕಣ್ಣಿಗೆ ಮಣ್ಣೆರಚೋ ಯತ್ನ ಇದು ಅನ್ನೋದಂತೂ ಸತ್ಯ.

ಇನ್ನು ಸರ್ಕಾರದ ಅನುದಾನದ ಹಣವನ್ನು ನುಂಗಿ ನೀರು ಕುಡಿದಿರೋ ಸೆನೆಟರ್ ಕೋತಿ ಮೇಲೆ ಆರೋಪ ಮಾಡ್ತಿದ್ದಾನೆ. ನೈಜೀರಿಯಾದ ಈ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಸಾಕಷ್ಟು ಜೋಕ್ ಗಳು ಕೂಡ ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...