alex Certify
ಕನ್ನಡ ದುನಿಯಾ       Mobile App
       

Kannada Duniya

ಆ ದೇಶದಲ್ಲಿ ಲೀಟರ್ ಹಾಲಿನ ಬೆಲೆ 13,000..!

milk-P-050716

ವೆನೆಜುವೆಲಾ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಬಡತನ ತಾಂಡವವಾಡ್ತಿದೆ. ಆಹಾರಕ್ಕಾಗಿ ಜನರು ಹೋರಾಟ ನಡೆಸುವಂತಾಗಿದೆ. ಈ ದೇಶದಲ್ಲಿ ಐವತ್ತು, ನೂರು ರೂಪಾಯಿ ಕೊಟ್ಟರೂ ಹಾಲು ಸಿಗೋದಿಲ್ಲ. ಹಾಲಿನ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ.

ಯಸ್, ವೆನೆಜುವೆಲಾದಲ್ಲಿ ಹಾಲು ಹಾಗೂ ಮೊಟ್ಟೆ ಬೆಲೆ ಗಗನಕ್ಕೇರಿದೆ. 13000 ರೂಪಾಯಿಗೆ ಒಂದು ಲೀಟರ್ ಹಾಲು ಸಿಗ್ತಾ ಇದೆ. 10,000 ರೂಪಾಯಿಗೆ ಒಂದು ಕೆಜಿ ಮೊಟ್ಟೆ ದೊರೆಯುತ್ತಿದೆ. ಒಂದು ಮೊಟ್ಟೆ ಬೆಲೆ 900 ರೂಪಾಯಿ. ಹಿಟ್ಟಿನ ಬೆಲೆ ಕೂಡ 1350ಕ್ಕೆ ಬಂದು ತಲುಪಿದೆ.

1200 ರೂಪಾಯಿ ಬೆಲೆಗೆ ಅಂಜೂರ ಮಾರಾಟವಾಗ್ತಿದೆ. ಹಾಲಿನ ವಾಹನ ಬರ್ತಾ ಇದ್ದಂತೆ ಅದನ್ನು ಶಕ್ತಿವಂತರು ಲೂಟಿ ಮಾಡಿಬಿಡ್ತಾರೆ. ಇಲ್ಲವಾದ್ರೆ ಕಿಲೋಮೀಟರ್ ವರೆಗೆ ದೊಡ್ಡ ಲೈನ್ ಇರುತ್ತದೆ. ಇದರಿಂದಾಗಿ ಹಾಲು ಸಾಮಾನ್ಯ ಜನರಿಗೆ ಸಿಗ್ತಾ ಇಲ್ಲ. ವೆನೆಜುವೆಲಾದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಇಲ್ಲದ ಕಾರಣ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ನೀಡಲಾಗ್ತಾ ಇಲ್ಲ. ಜೊತೆಗೆ ಔಷಧಿಗಳು ಖಾಲಿಯಾಗಿವೆ.

ಆರು ಮಿಸ್ ವರ್ಲ್ಡ್, 7 ಮಿಸ್ ಯುನಿವರ್ಸ್, 6 ಮಿಸ್ ಇಂಟರ್ ನ್ಯಾಷನಲ್ ಹಾಗೂ 2 ಮಿಸ್ ಅರ್ಥ್ ಹೀಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಸೌಂದರ್ಯವತಿಯರನ್ನು ಹೊಂದಿರುವ ದೇಶದಲ್ಲಿ ಈಗ ಬಡತನ ತಾಂಡವವಾಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...