alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಲಿ ಕಿಸ್ ಮಾಡಿದ್ರೆ ಬದಲಾಗುತ್ತೆ ಪ್ರೇಮಿಗಳ ಅದೃಷ್ಟ

2017_2image_17_30_387269840couple1-ll

ಪ್ರೇಮಿಗಳು ಶಾಂತವಾದ, ಯಾವುದೇ ಕಿರಿಕಿರಿಯಿಲ್ಲದ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ವಚ್ಛಂದವಾಗಿ ಹಾರುವ ಮನಸ್ಸುಗಳು ಪರಸ್ಪರ ಅರ್ಥ ಮಾಡಿಕೊಳ್ಳಲು ಅವಕಾಶವಿರುವ ಪ್ರದೇಶಗಳೆಂದ್ರೆ ಅವರಿಗೆ ಇಷ್ಟ. ಪ್ರೇಮಿಗಳಿಗೆ ಪ್ರಿಯವಾದ ಸ್ಥಳವೊಂದು ಮೆಕ್ಸಿಕೋದಲ್ಲಿದೆ. ಕಿಸ್ ಮಾಡಲೆಂದೇ ಸಾಕಷ್ಟು ಪ್ರೇಮಿಗಳು ಮೆಕ್ಸಿಕೋದ ಗುವಾನಾಜುವಾಟೊಗೆ ಬರ್ತಾರೆ.

ಅಷ್ಟಕ್ಕೂ ಅಲ್ಲಿಗೆ ಹೋಗಿ ಕಿಸ್ ಮಾಡ್ಬೇಕಾ ಎಂಬ ಪ್ರಶ್ನೆ ನಿಮ್ಮಲ್ಲಿ ಕಾಡ್ತಿರಬಹುದು. ಅಲ್ಲಿಗೆ ಹೋಗಿ ಕಿಸ್ ಮಾಡೋದ್ರಿಂದ 15 ವರ್ಷಗಳ ಗುಡ್ ಲಕ್ ನಿಮಗೆ ಸಿಗಲಿದೆ ಎನ್ನಲಾಗ್ತದೆ. ಈ ನಗರದ ಪ್ರತಿಯೊಂದು ಗಲ್ಲಿಗಳಲ್ಲಿಯೂ ನಿಮಗೆ ಪ್ರೇಮಿಗಳು ಕಾಣ ಸಿಗ್ತಾರೆ.

ಎಲ್ಲ ಗಲ್ಲಿಗಳಲ್ಲಿಯೂ ಮೆಟ್ಟಿಲುಗಳನ್ನು ಮಾಡಲಾಗಿದೆ. ಅದ್ರ ಮೇಲೆ ನಿಂತು ಕಿಸ್ ಮಾಡ್ತಾರೆ ಪ್ರೇಮಿಗಳು. ಅದ್ರಲ್ಲೂ ಕೊಬಲ್ಸ್ಟೋನ್ ಹೆಸರಿನ ಗಲ್ಲಿಯಲ್ಲಿ ಪ್ರೇಮಿಗಳು ಸದಾ ತುಂಬಿರ್ತಾರೆ. ದೂರದೂರುಗಳಿಂದ ಸಂಗಾತಿ ಜೊತೆ ಇಲ್ಲಿಗೆ ಬರುವ ಪ್ರೇಮಿಗಳ ಪರಸ್ಪರ ಮುತ್ತಿಡುತ್ತಾರೆ. ಹೀಗೆ ಮಾಡಿದ್ರೆ ಜೀವನ ಪೂರ್ತಿ ಒಟ್ಟಿಗಿರ್ತಾರೆ ಎಂಬ ನಂಬಿಕೆ ಜನರದ್ದು. ಅಲ್ಲಿಗೆ ಹೋಗಿ ಕಿಸ್ ಮಾಡದೆ ವಾಪಸ್ ಬಂದ್ರೆ ಪ್ರೇಮಿಗಳ ಜೀವನದಲ್ಲಿ ಕಷ್ಟ ಶುರುವಾಯ್ತು ಎಂದೇ ಅರ್ಥವಂತೆ. ಇಲ್ಲಿ ಕಿಸ್ ಮಾಡಿದ್ರೆ ಅದೃಷ್ಟ ಒಲಿಯುತ್ತೆ ಅಂತಾರೆ ಅಲ್ಲಿನ ಜನ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...