alex Certify
ಕನ್ನಡ ದುನಿಯಾ       Mobile App
       

Kannada Duniya

ಲೈವ್ ನೀಡುವಾಗಲೇ ಆಕೆಗಾಗಿತ್ತು ಕೆಟ್ಟ ಅನುಭವ…!

ಹೊರಗೆ ಹೋಗಿ ದುಡಿಯುವ ಮಹಿಳೆಯರು ದಿನ ಬೆಳಗಾದರೆ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಮಾಧ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿದಿನವೂ ಒಂದು ಸವಾಲಿನ ದಿನವೇ ಆಗಿರುತ್ತದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ ಹೊರದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ ಅನ್ನೋದಕ್ಕೆ ಈ ಘಟನೆ ಸಾಕ್ಷಿ.

ಮೆಕ್ಸಿಕನ್ ವರದಿಗಾರ್ತಿ ಮಾರಿಯಾ ಫೆರ್ನಾಂಡಾ ಮೊರಾ ಎಂಬಾಕೆ ಅಲ್ಲಿನ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಕೊನ್ಯಾಕಫ್ ಚಾಂಪಿಯನ್ ಲೀಗ್ ಹಿನ್ನೆಲೆಯಲ್ಲಿ ವರದಿಗೆಂದು ಬಂದಿದ್ದಳು. ಸ್ಟೇಡಿಯಂ ಹೊರಭಾಗದಲ್ಲಿ ಅಭಿಮಾನಿಗಳನ್ನು ಮಾತನಾಡಿಸಿ ನೇರಪ್ರಸಾರ ಕಾರ್ಯಕ್ರಮ ನಡೆಸಿಕೊಡುತ್ತಿದ್ದಳು.

ಈ ವೇಳೆ ಅಲ್ಲಿ ನೆರೆದ ಅಭಿಮಾನಿಗಳ ಗುಂಪೊಂದು ಆಕೆಯ ಹಿಂಭಾಗದಿಂದ ಬಂದು ಮಾತನಾಡಿ, ಕುಣಿದು, ಕುಪ್ಪಳಿಸಿದ ಬಳಿಕ ಆಕೆಯನ್ನು ದೂಡಿರುವುದು ಕ್ಯಾಮರಾದಲ್ಲೂ ದಾಖಲಾಗಿದೆ. ಆ ಬಳಿಕ ಮೊರಾ ಆತನಿಗೆ ಲೋಗೋದಲ್ಲೇ ನೂಕಿದ್ದಾಳೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...