alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರಿ ನಿರ್ದೋಷಿ ಎಂದ ನ್ಯಾಯಾಧೀಶ, ಕಾರಣ ಕೇಳಿದ್ರೆ….

rape

ಮೆಕ್ಸಿಕೋದಲ್ಲಿ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ವಿಚಿತ್ರ ತೀರ್ಪು ನೀಡಿದ್ದಾರೆ. ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ 21 ವರ್ಷದ ಯುವಕ ನಿರ್ದೋಷಿ ಅಂತಾ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅದಕ್ಕೆ ಜಡ್ಜ್ ಕೊಟ್ಟ ಕಾರಣ ಏನ್ ಗೊತ್ತಾ? ಕಾಮುಕ ತನ್ನ ಕೃತ್ಯವನ್ನು ಎಂಜಾಯ್ ಮಾಡಿಲ್ಲ, ಹಾಗಾಗಿ ಆತ ಆರೋಪ ಮುಕ್ತ ಎಂದಿದ್ದಾರೆ.

2015 ರ ಹೊಸ ವರ್ಷಾಚರಣೆ ವೇಳೆ ನಡೆದ ಘಟನೆ ಇದು. ಡಿಯಾಗೋ ಕ್ರೂಸ್ ಎಂಬಾತ ತನ್ನ ನಾಲ್ವರು ಸ್ನೇಹಿತರ ಜೊತೆ ಸೇರಿ 17 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಡಿಯಾಗೋ ವಿದ್ಯಾರ್ಥಿನಿಯ ಗುಪ್ತಾಂಗಗಳನ್ನು ಸ್ಪರ್ಷಿಸಿದ್ದರೂ ವಿಷಯ ಲೋಲುಪತೆಯಿಂದ ಆತ ಆ ಕೃತ್ಯ ಎಸಗಿಲ್ಲ, ಹಾಗಾಗಿ ಆತ ದೋಷಿಯಲ್ಲ ಅಂತಾ ನ್ಯಾಯಾಧೀಶರು ಹೇಳಿದ್ದಾರೆ.

ಅವಳನ್ನು ಸ್ಪರ್ಷಿಸಿದ ಮಾತ್ರಕ್ಕೆ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ, ಕಾಮತೃಷೆಯಿಂದ ಮಾಡಿದ್ದರೆ ಮಾತ್ರ ಅಪರಾಧ ಎಂದಿದ್ದಾರೆ. ಕೋರ್ಟ್ ತೀರ್ಪಿನ ಬಗ್ಗೆ ನೊಂದ ಯುವತಿ ಮತ್ತಾಕೆಯ ಪೋಷಕರು ಆಘಾತ ವ್ಯಕ್ತಪಡಿಸಿದ್ದಾರೆ. ಆರೋಪಿ ಡಿಯಾಗೋ ಶ್ರೀಮಂತ ಕುಟುಂಬದವನಾಗಿದ್ದು, ಈ ಘಟನೆಯ ನಂತರ ಸ್ಪೇನ್ ಗೆ ಪರಾರಿಯಾಗಿದ್ದ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...